ಬಂಟ್ವಾಳದಲ್ಲಿ ಅಬ್ಬರದ ಗುಡುಗು ಸಹಿತ ಮಳೆ
Monday, October 19, 2026
ಬಂಟ್ವಾಳ: ಬಿ.ಸಿ.ರೋಡು, ಬಂಟ್ವಾಳದಾದ್ಯಂತ ಸೋಮವಾರ ಮಧ್ಯಾಹ್ನದ ಬಳಿಕ ಅಬ್ಬರದ ಗುಡುಗು, ಮಿಂಚು ಸಹಿತ ಗಾಳಿ, ಮಳೆ ಜನರನ್ನು ಕಂಗೆಡಿಸಿತು.
ಮಿಂಚಿನ ಜೊತೆ ಒಂದೊಂದು ಗುಡುಗಿನ ಅಬ್ಬರ ಜನರನ್ನು ನಡುಗಿಸಿತು. ಬೆಳಗ್ಗಿನ ಹೊತ್ತು ಮೋಡಕವಿದ ವಾತಾವರಣವಿದ್ದು, ಮಧ್ಯಾಹ್ನದ ಬಳಿಕ ಏಕಾಏಕಿ ಗುಡುಗು,ಮಿಂಚಿನ ಜೊತೆಗೆ ಗಾಳಿ, ಮಳೆಯು ಧಾರಕಾರವಾಗಿ ಸುರಿಯಿತು.
ಬಿ.ಸಿ.ರೋಡು ಸಹಿತ ವಿವಿಧ ದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯ ಸಂಭ್ರಮದಲ್ಲಿದ್ದು,ಗುಡುಗು,ಮಿಂಚು ಸಹಿತ ಗಾಳಿ, ಮಳೆಗೆ ಜನರಲ್ಲಿ ಕಸಿವಿಸಿಗೊಳಿಸಿತು.
ಬಿ.ಸಿ.ರೋಡು ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ನಿಂತು ಕೃತಕ ಕೆರೆ ನಿರ್ಮಿಸಿ ಬಳಿಕ ನಿಧಾನವಾಗಿ ಹರಿದು ಹೋಗುತ್ತಿರುವ ಸಂಪ್ರದಾಯ ಕಳೆದ ಏಳೆಂಟು ವರ್ಷಗಳಿಂದ ಇನ್ನೂ ಚಾಚೂ ತಪ್ಪದೇ ಮುಂದುವರಿದ ದೃಶ್ಯ ಕಂಡುಬಂತು.