ಅಕ್ರಮ ಸಾಗಾಟ: ಕಪ್ಪು ಕಲ್ಲು ಸಹಿತ ಟಿಪ್ಪರ್ ಲಾರಿ ವಶ
Friday, October 2, 2026
ಬಂಟ್ವಾಳ: ದಾಸಕೋಡಿ ಸಮೀಪದ ಚೆಂಡೆ ಎಂಬಲ್ಲಿ ಅಕ್ರಮ ಸಾಗಾಟ ಮಾಡುತ್ತಿದ್ದ ಕಪ್ಪು ಕಲ್ಲು ಸಹಿತ ಟಿಪ್ಪರ್ ಲಾರಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ನಗರ ಪೊಲೀಸರು ಈ ದಾಳಿ ನಡೆಸಿದ್ದು, ಟಿಪ್ಪರ್ ಚಾಲಕ ಬದಿಯಡ್ಕ ನಿವಾಸಿ ಸೆಬಾಸ್ಟಿಯನ್ ಜೇಕಬ್ ಅವರು ಕೇರಳ ನೋಂದಣಿಯ ಟಿಪ್ಪರ್ ಲಾರಿಯಲ್ಲಿ 10 ಟನ್ ಅನ್ ಸೈಝ್ ಕಪ್ಪು ಕಲ್ಲುಗಳನ್ನು ಬಾಳ್ತಿಲ ಗ್ರಾಮದ ಕೋರ್ಯದ ಎಂಬಲ್ಲಿಂದ ಯಾವುದೇ ಪರವಾನಿಗೆ ಇಲ್ಲದೆ ಕಾಸರಗೋಡಿಗೆ ಸಾಗಿಸುತ್ತಿದ್ದರು ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.