ರೇಖಾ ಕೆ.ಎಸ್. ಅವರಿಗೆ ಬೀಳ್ಕೊಡುಗೆ

ರೇಖಾ ಕೆ.ಎಸ್. ಅವರಿಗೆ ಬೀಳ್ಕೊಡುಗೆ


ಮ೦ಗಳೂರು: ಮೆಸ್ಕಾ೦ನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಕಾರ್ಪೋರೇಟ್ ಕಚೇರಿಯಲ್ಲಿ ಹಿರಿಯ ಸಹಾಯಕಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ ರೇಖಾ ಕೆ.ಎಸ್. ಅವರಿಗೆ ಮೆಸ್ಕಾ೦ ಕಾಪೊ೯ರೇಟ್ ಕಚೇರಿ ಸಭಾ೦ಗಣದಲ್ಲಿ ಸೆ.30 ರಂದು ಸನ್ಮಾನ ಹಾಗೂ ವಿದಾಯ ಸಮಾರ೦ಭ ನಡೆಯಿತು.

ಮುಖ್ಯ ಅತಿಥಿಗಳಾಗಿದ್ದ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು, ಸಮಾರ೦ಭದ ಅಧ್ಯಕ್ಷತೆ ವಹಿಸಿದ್ದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಶಾ, ಮುಖ್ಯ ಅತಿಥಿಗಳಾಗಿದ್ದ ತಾ೦ತ್ರಿಕ ನಿದೇ೯ಶಕ ಹರೀಶ್ ಕುಮಾರ್ ವಿ., ಮೆಸ್ಕಾ೦ ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ್  ಅವರು ರೇಖಾ ಕೆ.ಎಸ್. ಅವರನ್ನು ಹಾರ, ಶಾಲು, ಫಲಪುಷ್ಪ ಹಾಗೂ ಸ್ಮರಣಿಕೆಯೊ೦ದಿಗೆ ಸಮ್ಮಾನಿಸಿ ಶುಭ ಹಾರೈಸಿದರು.

ರೇಖಾ ಕೆ.ಎಸ್. ಅವರು ಮಾತನಾಡಿ, ಸ೦ಸ್ಥೆ ತೋರಿದ ಪ್ರೀತಿಗೆ ಅಭಾರಿಯಾಗಿದ್ದು, ಮೆಸ್ಕಾ೦ನಲ್ಲಿ ನನ್ನ ಸೇವೆ ಅವಿಸ್ಮರಣೀಯವಾಗಿದೆ ಎ೦ದರು.

ಸಹಾಯಕ ಪ್ರಧಾನ ವ್ಯವಸ್ಥಾಪಕ ನವೀನ್ ಕುಮಾರ್ ಅವರು ಸ್ವಾಗತಿಸಿದರು. ರವಿ ಮಠಪತಿ ಅವರು ನಿವೃತ್ತರ ಪರಿಚಯ ನೀಡಿದರು. ವಿನಯ ಅವರು ನಿರೂಪಿಸಿ, ಪರಸಪ್ಪ ಅಂಬಿಗೇರ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article