ಅಕ್ರಮ ಮರಳು ಸಾಗಾಟ ಪತ್ತೆ
Saturday, October 3, 2026
ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಸುಜೀರ ಕಾನ ಎಂಬಲ್ಲಿ ಅಕ್ರಮವಾಗಿ ಮರಳು ಸಾಗಟದ ಪಿಕಪ್ ವಾಹನವನ್ನು ಬಂಟ್ವಾಳ ಗ್ರಾಂತರ ಪೊಲೀಸರು ಪತ್ತೆಹಚ್ಚಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಮತ್ತವರ ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ಸುಜೀರ್ ಮಲ್ಲಿ ಕಡೆಯಿಂದ ಮಾರಿಪಳ್ಳ ಕಡೆಗೆ ಬರುತ್ತಿದ್ದ ಮರಳು ತುಂಬಿದ ಪಿಕಪ್ ನ್ನು ಅನುಮಾನದಿಂದ ತಡೆದು ನಿಲ್ಲಿಸಿದಾಗ ಅದರ ಚಾಲಕನ ಪಿಕಪ್ ಸ್ಥಳದಲ್ಲೇ ನಿಲ್ಲಿಸಿ ಪರಾರಿಯಾಗಿದ್ದಾನೆ.
ಮರಳನ್ನು ಎಲ್ಲಿಂದಲೋ ಕಳವು
ಮಾಡಿಕೊಂಡು ಬಂದಿದ್ದು, ಪಿಕಪ್ ಸಹಿತ ಮರಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.