ಕೋಳಿ ಅಂಕಕ್ಕೆ ದಾಳಿ

ಕೋಳಿ ಅಂಕಕ್ಕೆ ದಾಳಿ

ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಗ್ರಾಮದ ಮಂಚಕಲ್ಲು ಮನಿಪಾಲ್ ದೋಟ ಎಂಬಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ  ಕೋಳಿ ಅಂಕಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿನಡೆಸಿ ನಾಲ್ಕು ಕೋಳಿ ಸಹಿತ ಒರ್ವನನ್ನು ವಶಕ್ಕೆ ಪಡೆದಿದ್ದಾರೆ.

ಖಚಿತ ವರ್ತಮಾನದ ಮೇರೆಗೆ ಶುಕ್ರವಾರ ರಾತ್ರಿ ಪೊಲೀಸರು ದಾಳಿಕಾರ್ಯಾಚರಣೆ ನಡೆಸಿದ್ದು,ಈ ಸಂದರ್ಭ ಚಾರ್ಜರ್ ಲೈಟ್ ನ ಸಹಾಯದಿಂದ ಹಣವನ್ನು ಪಣವನ್ನಾಗಿರಿಸಿಕೊಂಡು ನಾಲ್ವರು ಕೋಳಿ ಅಂಕದಲ್ಲಿ ನಿರತರಾಗಿದ್ದರೆನ್ನಲಾಗಿದೆ.

ದಾಳಿಯ ವೇಳೆ ಮೂವರು ಪರಾರಿಯಾಗಿದ್ದು,ಒರ್ವನ ಸಹಿತ ಸ್ಥಳದಲ್ಲಿದ್ದ ನಾಲ್ಕು ಕೋಳಿಗಳನ್ನು ವಶಪಡಿಸಿದ್ದಾರೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article