ಸಚಿವ ಯು.ಟಿ. ಖಾದರ್ ಜನ್ಮದಿನ: ಅಭಿಮಾನಿ ಬಳಗದಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಉಮ್ಮರ್ ಫಾರೂಕ್ ಅವರು, ಸಚಿವ ಯು.ಟಿ. ಖಾದರ್ ಅವರು ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಜನಪರ ಕಾಳಜಿ ಹೊಂದಿರುವ ಅವರು ಇನ್ನಷ್ಟು ವರ್ಷಗಳ ಕಾಲ ಜನಸೇವೆ ಮಾಡಲು ಭಗವಂತ ಆರೋಗ್ಯ ಮತ್ತು ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸಿದರು.
ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಮುಡಿಪು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವೃಂದಾ ಪೂಜಾರಿ ಮಾತನಾಡಿ, ಆರೋಗ್ಯ ಇಲಾಖೆಯ ಸಚಿವರಿಗೆ, ಜನರ ಸೇವೆ ಮಾಡುವ ಭಾಗ್ಯ ಸಿಗಲಿ ಎಂದು ಹಾರೈಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರುಕ್ಸನಾ ಬಾನು, ಸದಸ್ಯರಾದ ಇಕ್ಬಾಲ್ ಸುಜೀರ್, ಹೀಶಾಮ್ ಫರಂಗಿಪೇಟೆ, ವಿಶುಕುಮಾರ್, ಫ್ರಾನ್ಸಿಸ್ ಮೇರೆಮಜಲು, ಸಾರಮ್ಮ, ಸಂಜೀವಿನಿ ಒಕ್ಕೂಟದ ಸದಸ್ಯರಾದ ರೇಶ್ಮಾ ಅಮ್ಮೆಮಾರ್, ಮಮತಾ ಕುಮ್ಡೆಲ್, ನೌಝೀನಾ, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ಅಹಮ್ಮದ್ ದಿಲ್ ಪೆರಿಮಾರ್, ತೌಫೀಕ್ ವಳಚ್ಚಿಲ್, ಯು.ಬಿ. ಸದಾಶಿವ ಕುಮ್ಡೆಲು, ಮುಬಾರಕ್ ಫರಂಗಿಪೇಟೆ, ಫಯಾಝ್ ಖಾನ್, ಸಿನಾನ್ ಮೇರೆಮಜಲು, ಬದ್ರುದ್ದೀನ್ ಕರ್ಮಾರ್, ಪರ್ಧಾನ್ ಫರಂಗಿಪೇಟೆ, ಶೌಬಾನ್ ಮಾರಿಪಳ್ಳ, ಬುಖಾರಿ ಕುಂಪಣಮಜಲು ಉಪಸ್ಥಿತರಿದ್ದರು.
ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ದಿನೇಶ್ ಕಾಮತ್, ಡಾ. ಜೀವನ್ ಮತ್ತಿತರರಿದ್ದರು.
