ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಆಗಿ ಬದಲಾಯಿಸಲು ಎಐಟಿಯುಸಿ ವಿರೋಧ
ಸೋಮವಾರ ಬಿ.ಸಿ.ರೋಡಿನ ಲಯನ್ಸ್ ಭವನದಲ್ಲಿ ನಡೆದ ಎಐಟಿಯುಸಿಯ 17ನೇ ದ.ಕ. ಮತ್ತು ಉಡುಪಿ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ತುಳು ಕನ್ನಡಿಗರ ಸಂಸ್ಕಾರ, ಸಂಸ್ಕೃತಿ ಬೆಸೆದುಕೊಂಡಿದೆ.ದೈವಾರಾಧನೆಯನ್ನು ಉಸಿರಾಗಿಸಿಕೊಂಡು ಕೃಷಿ ಮತ್ತು ಇತರ ಕುಲ ಕಸುಬುಗಳನ್ನು ಮೂಲವಾಗಿಟ್ಟುಕೊಂಡು ಅನೇಕತೆಯಲ್ಲಿ ಏಕತೆಯೊಂದಿಗೆ ತುಳುವರು ಜೀವಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕಾರ್ಮಿಕ ವರ್ಗ ಉದ್ಯೋಗವಿಲ್ಲದೇ, ಉದ್ಯೋಗದ ರಕ್ಷಣೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಪ್ರಭುತ್ವದ ಈ ಹುನ್ನಾರಗಳನ್ನು ತಿಳಿದುಕೊಂಡು ದುಡಿಯುವ ವರ್ಗ ಸಂಘಟಿತರಾಗಿ ತನ್ನ ಹಕ್ಕುಗಳಿಗಾಗಿ, ದೇಶದ ಸ್ವಾಭಿಮಾನಕ್ಕಾಗಿ ನಿರಂತರ ಹೋರಾಟಕ್ಕೆ ಧುಮುಕಬೇಕಾಗಿದೆ. ಈ ನಿಟ್ಟಿನಲ್ಲಿ 106 ವರ್ಷಗಳ ಸುದೀರ್ಘ ಹೋರಾಟದ ಬದ್ಧತೆಯ ಪರಂಪರೆಯಿರುವ ಎಐಟಿಯುಸಿ ಕಾರ್ಮಿಕ ಒಕ್ಕೂಟದಡಿ ಮುನ್ನಡೆಯಬೇಕು ಎಂದರು.
ಬಹಿರಂಗ ಸಭೆಯನ್ನುದ್ದೇಶಿಸಿ ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಕಾವ್ಯದರ್ಶಿ ಬಿ.ಶೇಖರ್, ಎಐಟಿಯುಸಿ ಮಾಜಿ ಜಿಲ್ಲಾಧ್ಯಕ್ಷ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಪ್ರಧಾನ ಕಾವ್ಯದರ್ಶಿ ವಿ.ಎಸ್ ಬೇರಿಂಜ ಮಾತನಾಡಿದರು. ಅಧ್ಯಕ್ಷತೆಯನ್ನು ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಎಚ್.ವಿ.ರಾವ್ ವಹಿಸಿದ್ದರು.
ಎಐಟಿಯುಸಿ ಜಿಲ್ಲಾ ಕೋಶಾಧಿಕಾರಿ ಎ.ಪಿ.ರಾವ್, ಎನ್ ಎಫ್ ಐ ಡಬ್ಲ್ಯೂ ಜಿಲ್ಲಾ ನಾಯಕಿ ಭಾರತಿ ಪ್ರಶಾಂತ್, ವಿವಿಧ ಸಾಮೂಹಿಕ ಸಂಘಟನೆಗಳನ್ನು ಪ್ರತಿನಿಧೀಕರಿಸುವ ಎಐಟಿಯುಸಿ ಮುಖಂಡರುಗಳಾದ ಬಿ.ಬಾಬು ಭಂಡಾರಿ, ಉಮಾವತಿ ಕುರ್ನಾಡು, ಮೀನಾಕ್ಷಿ ಶಾಂತಿಪಳಿಕೆ, ಶಶಿಕಲಾ ಗಿರೀಶ್ ಉಡುಪಿ, ಒ ಕೃಷ್ಣ ವಿಟ್ಲ, ಶಿವಾನಂದ ಉಡುಪಿ ಉಪಸ್ಥಿತರಿದ್ದರು.
ಬಹಿರಂಗ ಸಭೆಗೆ ಮುನ್ನ ಬಿ.ಸಿ.ರೋಡು ಅಂಚೆ ಕಚೇರಿ ಬಳಿ ಇರುವ ಸಿಪಿಐ ಕಚೇರಿಯಿಂದ ಲಯನ್ಸ್ ಸೇವಾ ಮಂದಿರದ ವರೆಗೆ ಮೆರವಣಿಗೆ ನಡೆಯಿತು. ಎಐಟಿಯುಸಿ ಜಿಲ್ಲಾ ಕಾವ್ಯದರ್ಶಿಗಳಾದ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ನಿರೂಪಿಸಿದರು. ಕರುಣಾಕರ ಮಾರಿಪಳ್ಳ ವಂದಿಸಿದರು.