ವರ್ಷಿತ್ ಕುತ್ತಾರ್ ನೆನಪಿನಲ್ಲಿ ಕುತ್ತಾರ್ ಡಿವೈಎಫ್ಐ ಜನಜಾಗೃತಿ
ಡಿ ವೈ ಎಫ್ ಐ ನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅಡ್ವಕೇಟ್ ಮನೋಜ್ ವಾಮಂಜೂರ್ ಮಾತನಾಡಿ, ಜನರಿಗೆ ನಿತ್ಯ ಜಾಗೃತಿಯನ್ನು ಮೂಡಿಸುವುದು ಡಿವೈಎಪ್ಐ ನ ಕರ್ತವ್ಯವಾಗಿರುತ್ತದೆ. ಪ್ರತಿ ಡಿ ವೈ ಎಫ್ ಐ ಸದಸ್ಯರು ಸಂಚಾರಿ ನಿಯಮಗಳ ಪಾಲನೆಯು ಕಾನೂನಿನ ನಿಯಮಕ್ಕಿಂತಲೂ ಅದು ನಮ್ಮ ಮತ್ತು ನಮ್ಮ ಕುಟುಂಬದ ಒಳಿತಿಗಾಗಿ ಪಾಲಿಸಬೇಕು ಮತ್ತು ಇತರರಿಗೂ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸಲು ಕಾನೂನು ಸುವ್ಯವಸ್ಥೆಯ ಜೊತೆ ಕೈಜೋಡಿಸಬೇಕು ಎಂದರು.
ಈ ಸಭೆಯನ್ನು ಉದ್ದೇಶಿಸಿ ಡಿವೈ ಎಫ್ಐನ ಉಳ್ಳಾಲ ತಾಲೂಕು ಅಧ್ಯಕ್ಷರಾದ ಅಡ್ವಕೇಟ್ ನಿತಿನ್ ಕುತ್ತಾರ್ ರವರು ಮಾತನಾಡಿ, ಸಂಚಾರಿ ನಿಯಮಗಳಲ್ಲಿ ಜೀವ ವಿಮೆ ಇದ್ದು ಬಹುತೇಕ ಯುವಕರು ಕಡಿಮೆಯ ವಿಮೆಯನ್ನು ಪಡೆದುಕೊಳ್ಳುತ್ತಾರೆ. ನಾವು ವಾಹನ ವಿಮೆಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಥಾರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ವಿಮೆ ಇದ್ದು ಇತರೇ ನಿಯಮಗಳನ್ನು ಪಾಲಿಸದೇ ಇದ್ದರೆ ಜೀವ ವಿಮೆಯು ಕೂಡ ಆನ್ವಯವಾಗುವುದಿಲ್ಲ. ಹಾಗಾಗಿ ಹೊಗೆ ತಪಾಸಣೆ, ಚಾಲನಾ ಪರವಾನಿಗೆ, ಹೆಲ್ಮೆಟ್ ಮೊದಲಾದ ನಿಯಮಗಳನ್ನು ಪಾಲಿಸಬೇಕು. ಹದಿನೆಂಟನೇ ವಯಸ್ಸಿನ ಒಳಗಿನ ಮಕ್ಕಳ ವಾಹನ ಚಲಾವಣೆ ಅಥವಾ ಪ್ರಾಯ ಸಮರ್ಥರು ವಾಹನ ಪರವಾನಿಗೆ ಇಲ್ಲದೆ ವಾಹನ ಚಲಾಯಿಸಿದರೆ ಅಂತಹ ಪ್ರಖರಣವನ್ನು ಕಾನೂನು ಗಂಭೀರವಾಗಿ ಪರಿಗಣೆಸುತ್ತದೆ.ಹಾಗಾಗಿ ನಾವು ಇರುವ ಸಂಚಾರಿ ಕಾನೂನು ಪಾಲಿಸಬೇಕು. ಕಾನೂನುಗಳನ್ನು ಜವಾಬ್ದಾರಿಯುತವಾಗಿ ಪಾಲಿಸುವ ಮೂಲಕ ನಮ್ಮ ಸಂಚಾರಿ ಹಕ್ಕುಗಳನ್ನು ಕೂಡ ನಾವು ಪಡೆದುಕ್ಕೊಳ್ಳಲು ಸಾಧ್ಯವಾಗಬೇಕು ಎಂದರು.
DYFI ಜಿಲ್ಲಾ ಉಪಾಧ್ಯಕ್ಷರಾದ ಸುನಿಲ್ ತೇವುಲ, ಉಳ್ಳಾಲ ವಲಯ ಸಮಿತಿ ಸದಸ್ಯರಾದ ನಿತೇಶ್ ತಲೆನೀರು , DYFI ಮಾಜಿ ಜಿಲ್ಲಾ ಮುಖಂಡರು , ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ್ ಟಿ , ರೈತ ಮುಖಂಡರ ಶೇಖರ್ ಕುಂದರ್,ಕಾರ್ಮಿಕ ಮುಖಂಡರಾದ ಜಯರಾಮ್ ತೇವುಲ, ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಸ್ವಾಗತಿಸಿ, ಅಭಿಷೇಕ್ ಕುತ್ತಾರು ವಂದಿಸಿದರು.
