ಅಮ್ಟಾಡಿಯಲ್ಲಿ ಬೃಹತ್ ಹೆಬ್ಬಾವಿನ ಆತಂಕ!: ಬೆಕ್ಕು, ನಾಯಿಗಳು ನಾಪತ್ತೆ

ಅಮ್ಟಾಡಿಯಲ್ಲಿ ಬೃಹತ್ ಹೆಬ್ಬಾವಿನ ಆತಂಕ!: ಬೆಕ್ಕು, ನಾಯಿಗಳು ನಾಪತ್ತೆ


ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಕಜಿಪಿತ್ಲು ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಏಕಾಏಕಿ ಬೆಕ್ಕು ಹಾಗೂ ನಾಯಿಗಳು ನಾಪತ್ತೆಯಾಗುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸಾಕುಪ್ರಾಣಿಗಳು ದಿಢೀರನೇ ಕಾಣೆಯಾಗುತ್ತಿದ್ದಂತೆ, ಯಾವುದೋ ಕಾಡುಪ್ರಾಣಿ ಅವುಗಳನ್ನು ಹೊತ್ತೊಯ್ಯುತ್ತಿರಬಹುದು ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿತ್ತು. ಈ ನಡುವೆ, ಅ.25 ರಂದು ಮಧ್ಯರಾತ್ರಿ ಬೃಹತ್ ಗಾತ್ರದ ಹೆಬ್ಬಾವೊಂದು ಬೆಕ್ಕನ್ನು ಹಿಡಿದು ಪೊದೆಯೊಳಗೆ ಸಾಗುತ್ತಿರುವುದು ಕಂಡುಬಂದಿದೆ.

ಪ್ರಾಣಿಗಳ ದಿಡೀರ್ ನಾಪತ್ತೆಗೆ ಹೆಬ್ಬಾವು ಕಾರಣ ಎಂಬುದು ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಈಗಾಗಲೇ ಪರಿಸರದ ಹಲವಾರು ಬೆಕ್ಕು, ನಾಯಿಗಳು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಈ ಹೆಬ್ಬಾವು ಇದೇ ಸ್ಥಳದಲ್ಲಿ ಬೀಡುಬಿಟ್ಟಿರಬಹುದೆಂಬ ಭೀತಿ ಸ್ಥಳೀಯರಲ್ಲಿ ಕಾಡುತ್ತಿದೆ.

ಜನವಸತಿ ಇರುವ ಪ್ರದೇಶದ ಸಮೀಪವೇ ಬೃಹತ್ ಹೆಬ್ಬಾವು ಕಾಣಿಸಿಕೊಂಡಿರುವುದರಿಂದ, ಸಾಕುಪ್ರಾಣಿಗಳ ಸುರಕ್ಷತೆಯ ಬಗ್ಗೆಯೂ ಗ್ರಾಮಸ್ಥರು ಚಿಂತಿತರಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article