ಟೆಲಿಫೋನ್ ಎಕ್ಸ್‌ಚೇಂಜ್‌ನಿಂದ ತಾಮ್ರದ ಕೇಬಲ್‌ಗಳ ಕಳವು

ಟೆಲಿಫೋನ್ ಎಕ್ಸ್‌ಚೇಂಜ್‌ನಿಂದ ತಾಮ್ರದ ಕೇಬಲ್‌ಗಳ ಕಳವು

ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದಲ್ಲಿರುವ ಬಿಎಸ್‌ಎನ್‌ಎಲ್ ಟೆಲಿಫೋನ್ ಎಕ್ಸ್‌ಚೇಂಜ್‌ನಿಂದ ತಾಮ್ರದ ಕೇಬಲ್‌ಗಳನ್ನು ಕಳವುಗೈದಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಅ.23ರ ಬೆಳಗ್ಗೆ ಬಿಎಸ್‌ಎನ್‌ಎಲ್ ಟವರ್ ಟೆಕ್ನಿಷಿಯನ್ ಮೊಬೈಲ್ ಆಪ್‌ನಲ್ಲಿ ಟವರ್‌ಗಳ ಕಾರ್ಯನಿರ್ವಹಣೆ ಪರಿಶೀಲಿಸುತ್ತಿದ್ದಾಗ ಪಣೋಲಿಬೈಲು ಹಾಗೂ ಇರಾ ಪ್ರದೇಶದ ಬಿಎಸ್‌ಎನ್‌ಎಲ್ ಮೊಬೈಲ್ ಟವರ್‌ಗಳು ಏಕಕಾಲಕ್ಕೆ ಡೌನ್ ಆಗಿರುವುದು ಕಂಡುಬಂದಿದೆ.

ಈ ಟವರ್‌ಗಳು ಮಂಚಿ ಗ್ರಾಮದ ಬಿಎಸ್‌ಎನ್‌ಎಲ್ ಟೆಲಿಫೋನ್ ಎಕ್ಸ್‌ಚೇಂಜ್ ಸಂಪರ್ಕ ಹೊಂದಿರುವುದರಿಂದ ಅನುಮಾನಗೊಂಡು ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಎಕ್ಸ್‌ಚೇಂಜ್‌ನ ಕೊಠಡಿಯ ಬಾಗಿಲನ್ನು ಒಡೆದು ಒಳಪ್ರವೇಶಿಸಿರುವ ಕಳ್ಳರು, ಬ್ಯಾಟರಿಯಿಂದ ಉಪಕರಣಗಳಿಗೆ ಸಂಪರ್ಕ ಕಲ್ಪಿಸಿದ್ದ ತಾಮ್ರದ ಸುಮಾರು 20 ಮೀಟರ್ ಉದ್ದದ ಎರಡು ಕೇಬಲ್‌ಗಳು ಹಾಗೂ 6 ಮೀಟರ್ ಉದ್ದದ ಎರಡು ಕೇಬಲ್‌ಗಳನ್ನು ತುಂಡರಿಸಿ ಕಳವುಗೈದಿರುವು ಬೆಳಕಿಗೆ ಬಂದಿದೆ.

ಈ ಕೃತ್ಯದಿಂದಾಗಿ ಸುತ್ತಮುತ್ತಲಿನ ಮೊಬೈಲ್ ಟವರ್‌ಗಳ ಸೇವೆ ಸ್ಥಗಿತಗೊಂಡು ಗ್ರಾಹಕರಿಗೆ ತೊಂದರೆಯಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article