ಸಾಲ ಮರಳಿಸುವಂತೆ ಕೇಳಿದಕ್ಕೆ ಚೂರಿ ಇರಿತ–ಆರೋಪಿ ಬಂಧನ

ಸಾಲ ಮರಳಿಸುವಂತೆ ಕೇಳಿದಕ್ಕೆ ಚೂರಿ ಇರಿತ–ಆರೋಪಿ ಬಂಧನ


ಬಂಟ್ವಾಳ: ಸಾಲದ ಹಣವನ್ನು ವಾಪಾಸು ಪಡೆಯಲು ತೆರಳಿದ್ದ ವ್ಯಕ್ತಿಗೆ ಚೂರಿಯಿಂದ ಇರಿದ ಆರೋಪಿಯನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಬಿ.ಮೂಡಾ ಗ್ರಾಮದ ಉದಯ್‌ ಚೂರಿ ಇರಿತಕ್ಕೆ ಒಳಗಾದವರು. ಅದೇ ಗ್ರಾಮದ ಅಜಿತ್ ಕುಮಾರ್ ಶೆಟ್ಟಿ (28) ಚೂರಿ ಇರಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಬಿ.ಮೂಡಾ ಗ್ರಾಮದ ಲೋಕೇಶ್ (27) ಎಂಬುವರು ಆರೋಪಿ ಅಜಿತ್ ಕುಮಾರ್ ಶೆಟ್ಟಿಗೆ ಸಾಲ ನೀಡಿದ್ದರು. ಸಾಲವನ್ನು ಮರಳಿಸುವಂತೆ  ಅವರು ಕೇಳಿದಾಗ, ‘ಪಲ್ಲಮಜಲು ಎಂಬಲ್ಲಿಗೆ ಬಂದು  ಹಣ ಪಡೆಯುವಂತೆ’ ಆರೋಪಿ ತಿಳಿಸಿದ್ದ. ಸಾಲದ ಹಣ ಪಡೆಯಲು ಲೋಕೇಶ್ ಅವರು ಸೋದರ ಉದಯ್ ಅವರನ್ನು ಪಲ್ಲಮಜಲು ಪ್ರದೇಶಕ್ಕೆ ಶನಿವಾರ ಸಂಜೆ ಕಳುಹಿಸಿದ್ದರು. ಆಗ ಆರೋಪಿಯು ಲೋಕೇಶ್ ಅವರನ್ನೂ ಸ್ಥಳಕ್ಕೆ ಬರುವಂತೆ ಕೇಳಿದ್ದ.  ಅವರು ಸ್ಥಳಕ್ಕೆ ತೆರಳಿದಾಗ, ಅವರ ಅಣ್ಣ ಉದಯ್‌ಗೆ ಆರೋಪಿ ಚೂರಿಯಿಂದ ಇರಿಯುತ್ತಿದ್ದ. ಬಳಿಕ ಅವರನ್ನೂ ಅಟ್ಟಿಸಿಕೊಂಡು ಹೋಗಿದ್ದ. ಗಾಯಗೊಂಡಿದ್ದ ಉದಯ್‌ ಅವರನ್ನು ಸ್ಥಳೀಯರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಲೋಕೇಶ್‌ ನೀಡಿದ ದೂರಿನ ಅನ್ವಯ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article