ಅವಧಿ ಮುಗಿದ ತಿಂಡಿಗಳ ರೀ ಪ್ಯಾಕಿಂಗ್: ದಾಳಿ, ಪರಿಶೀಲನೆ

ಅವಧಿ ಮುಗಿದ ತಿಂಡಿಗಳ ರೀ ಪ್ಯಾಕಿಂಗ್: ದಾಳಿ, ಪರಿಶೀಲನೆ


ಮಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ರ ಸೂಚನೆಯ ಮೇರೆಗೆ ಸಿಹಿ ತಿಂಡಿ ತಿನಿಸು ತಯಾರಿಕಾ ಘಟಕ ಹಾಗೂ ಮಾರಾಟ ಮಾಡುವ ಆಹಾರೋದ್ಯಮಗಳ ಪರಿಶೀಲನೆ ನಡೆಸಲು ದ.ಕ.ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದ ತಂಡವು ಶನಿವಾರ ನಗರದಲ್ಲಿ ದಾಳಿ ನಡೆಸಿತು.

ಬೇಕರಿ ಆಹಾರ ಉತ್ಪನ್ನಗಳನ್ನು ರಿಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವ ನಗರದ ಫಳ್ನೀರ್ ಜಂಕ್ಷನ್‌ನಲ್ಲಿರುವ ಜಿ.ಐ. ಬೇಕರಿ ಮೇಲೆ ದಾಳಿ ನಡೆಸಲಾಯಿತು.

ಆಹಾರದ ಪ್ಯಾಕೆಟ್‌ಗಳ ಮೇಲೆ ತಯಾರಿಕಾ ದಿನಾಂಕ, ಬಳಕೆಯ ಅವಧಿ ಮೀರುವ ದಿನಾಂಕ, ಬ್ಯಾಚ್ ನಂಬರ್, ಎಫ್‌ಎಸ್‌ಎಸ್‌ಎ ಐ ಲೈಸೆನ್ಸ್ ನಂಬರ್ ಇಲ್ಲದ ಆಹಾರ ಉತ್ಪನ್ನಗಳನ್ನು ವಶಕ್ಕೆ ಪಡೆದು ಮುದ್ರೆ ಹಾಕಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article