ಕೋಳಿ ತ್ಯಾಜ್ಯದ ಕಾರ್ಖಾನೆಯಲ್ಲಿ ಅವಘಡ, ಓರ್ವ ಯುವಕ ಮೃತ್ಯು: ಇಬ್ಬರಿಗೆ ಗಾಯ

ಕೋಳಿ ತ್ಯಾಜ್ಯದ ಕಾರ್ಖಾನೆಯಲ್ಲಿ ಅವಘಡ, ಓರ್ವ ಯುವಕ ಮೃತ್ಯು: ಇಬ್ಬರಿಗೆ ಗಾಯ

ಕಾಸರಗೋಡು: ಕುಂಬಳೆ ಅನಂತಪುರದ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಸಂಭವಿಸಿದ ಅವಘದದಲ್ಲಿ ಯುವಕನೋರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. 

ಮೃತರನ್ನು ಒಡಿಶಾ ಮೂಲದ ಮಹೇಶ್ವರ್ (19) ಎಂದು ಗುರುತಿಸಲಾಗಿದೆ. ಗಾಯಗೊಂಡ ತಾನೂಜಿ (24) ಅವರ ಸ್ಥಿತಿ ಗಂಭೀರವಾಗಿದೆ. ಸಿದ್ಧಾನಂದ (21) ಕೂಡ ಗಾಯಗೊಂಡಿದ್ದಾರೆ.

ಅನಂತಪುರ ಕೈಗಾರಿಕಾ ಎಸ್ಟೇಟ್‌ನ ಆಕ್ಸಿಜನ್ ಪ್ರೊಮ್ಯಾಕ್ಸ್ ಕಾರ್ಖಾನೆಯಲ್ಲಿ ರವಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ಅಪಘಾತ ನಡೆದಿದೆ. ಕೋಳಿ ತ್ಯಾಜ್ಯದಿಂದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆ ಇದಾಗಿದ್ದು ಕಾರ್ಖಾನೆಯ ಬಾಯ್ಲರ್‌ನಿಂದ ಅನಿಲವು ಬಲವಾಗಿ ಹೊರಬಂದ ವೇಳೆ ಅಲ್ಲಿದ್ದ ಮಹೇಶ್ವರ್ ಸಮೀಪದಲ್ಲಿದ್ದ ಆಳವಾದ ಕೋಳಿ ತ್ಯಾಜ್ಯದ ಗುಂಡಿಗೆ ಎಸೆಯಲ್ಪಟ್ಟು ಬಿದ್ದಿದ್ದಾರೆ.

ಮಹೇಶ್ವರ್ ಅವರನ್ನು ರಕ್ಷಿಸಲು ಮುಂದಾದ ತಾನೂಜಿ ಹಾಗೂ ಸಿದ್ಧಾನಂದ ಕೂಡ ಗಾಯಗೊಂಡರು. ಕಾರ್ಖಾನೆಯ ಇತರ ಕಾರ್ಮಿಕರು ಮೂವರನ್ನೂ ಗುಂಡಿನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು.

ಮಹೇಶ್ವರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡ ತಾನೂಜಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ಧಾನಂದರಿಗೆ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article