ಅ.30 ರಿಂದ ನ.1 ರವರೆಗೆ ಕಟೀಲಿನಲ್ಲಿ ನುಡಿಹಬ್ಬ

ಅ.30 ರಿಂದ ನ.1 ರವರೆಗೆ ಕಟೀಲಿನಲ್ಲಿ ನುಡಿಹಬ್ಬ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ನಡೆಯುವ ಆರನೆಯ ವರ್ಷದ ಭ್ರಮರ ಇಂಚರ ನುಡಿಹಬ್ಬ ಸಮ್ಮೇಳನ ಅ.30ರಿಂದ ನ.1ರವರೆಗೆ ಮೂರು ದಿನಗಳ ಕಾಲ ಕಟೀಲು ಪದವೀಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. 

ಖ್ಯಾತ ಸಾಹಿತಿ ಬಿ. ಜನಾರ್ದನ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಅ.30 ರಂದು ಬೆಳಗ್ಗೆ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಎಸ್. ಭಟ್ ಉದ್ಘಾಟಿಸಲಿದ್ದಾರೆ. ವಿದ್ವಾಂಸ ಡಾ. ಚಿನ್ನಪ್ಪ ಗೌಡ ನುಡಿಸೇಸೆಯ ಮಾತುಗಳನ್ನಾಡಲಿದ್ದಾರೆ. ಕೆ.ಎಂ. ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ದಿವಾಕರ ಕದ್ರಿ ಧ್ವಜಾರೋಹಣಗೈಯಲಿದ್ದಾರೆ. ವಸ್ತುಪ್ರದರ್ಶನವನ್ನು ಸಾಂಸದ ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದು, ಶಾಸಕ ಉಮಾನಾಥ ಕೋಟ್ಯಾನ್ ಕಾಲೇಜುಗಳ ವಿಶೇಷಾಂಕಗಳಾದ ಇಂಚರ, ಭ್ರಮರವಾಣಿಗಳನ್ನು ಬಿಡುಗಡೆಗೊಳಿಸಲಿದ್ದಾರೆ.

ಹಿಂದಿನ ನುಡಿಹಬ್ಬಗಳ ಅಧ್ಯಕ್ಷ ಶ್ರೀಧರ ಡಿ.ಎಸ್., ಕೆ.ಪಿ. ರಾವ್, ಪಾದೇಕಲ್ಲು ವಿಷ್ಣು ಭಟ್, ಲಕ್ಷ್ಮೀಶ ತೋಳ್ಪಾಡಿ, ಕಬ್ಬಿನಾಲೆ ಡಾ. ವಸಂತ ಭಾರಧ್ವಾಜರ ಉಪಸ್ಥಿತಿಯಲ್ಲಿ ಗೋಷ್ಟಿ ನಡೆಯಲಿದೆ. ಮೂರ್ತಿ ದೇರಾಜೆ ಮಕ್ಕಳ ಸಾಹಿತ್ಯ ಗೋಷ್ಟಿಯಲ್ಲಿ ಮಾತನಾಡಲಿದ್ದಾರೆ.

ಅ.31 ರಂದು ಸಮ್ಮೇಳನಾಧ್ಯಕ್ಷ ಜನಾರ್ದನ ಭಟ್ ಅವರೊಂದಿಗೆ ಸಂವಾದ ನಡೆಯಲಿದ್ದು, ಬದಲಾದ ಮನಸ್ಥಿತಿಯ ಬಗ್ಗೆ ಡಾ. ಮೋಹನ ಆಳ್ವ, ಶಿಕ್ಷಣವೆಂದರೆ ಇಷ್ಟೇ ಅಲ್ಲ ಗೋಷ್ಟಿಯಲ್ಲಿ ಡಾ. ಗುರುರಾಜ ಕರ್ಜಗಿ, ನನ್ನ ಹೆಮ್ಮೆಯ ಭಾರತದ ಬಗ್ಗೆ ಮುಮ್ತಾಸ್ ಅಬ್ದುಲ್ ನೆಲ್ಯಡ್ಕ ಮಾತನಾಡಲಿದ್ದಾರೆ. ಜನಸಾಮಾನ್ಯ ಸಾಧಕರು ಗೋಷ್ಟಿಯಲ್ಲಿ ನಿತ್ಯಾನಂದ ಒಳಕಾಡು, ಸುರೇಂದ್ರ ಕೋಟ್ಯಾನ್ ಉದ್ಯಾವರ, ಶಾನಾಡಿ ರಾಮಚಂದ್ರ ಭಟ್ಟ, ರಘುರಾಮ ಕುಲಾಲ್ ಆಲೂರು ಭಾಗವಹಿಸಲಿದ್ದಾರೆ. ಬಹುಭಾಷಾ ಪ್ರೀತಿಯ ಬಗ್ಗೆ ಡಾ. ಶಾಂತಾರಾಮ ಪ್ರಭು ಮಾತನಾಡಲಿದ್ದಾರೆ.

ನ.1 ರಂದು ರಜನಿ ರಾವ್ ದಾಂಡೇಲಿ ಹಕ್ಕಿ ಹಾರುತಿದೆ ನೋಡಿದಿರಾ ಗೋಷ್ಟಿಯಲ್ಲಿ, ಪವನ್ ಕಿರಣ್‌ಕೆರೆ ಹಾಗೂ ನಟ ಪೃಥ್ವಿ ಅಂಬರ್ ಸಾಧನೆಯ ಹಾದಿಯಲ್ಲಿ ಗೋಷ್ಟಿಯಲ್ಲಿ ಪ್ರವೀಣ್ ಗುಡಿ ಹುಬ್ಬಳ್ಳಿ ವಿದ್ಯಾವಂತನಿಂದ ಪ್ರಜ್ಞಾವಂತನ ಕಡೆಗೆ ಗೋಷ್ಟಿಯಲ್ಲಿ ಉಪನ್ಯಾಸ ನೀಡಲಿದ್ದಾರೆ. ನಮ್ಮೆಲ್ಲರ ಶಾಲೆ ಹಳೆವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಕಟೀಲು ಶಿಕ್ಷಣ ಸಂಸ್ಥೆಗಳ ನಿವೃತ್ತ ಶಿಕ್ಷಕರಾದ ಕೇಶವ ಹೊಳ್ಳ, ಡಾ. ಜಯರಾಮ ಶೆಟ್ಟಿ, ವಾಸುದೇವ ಪ್ರಭು, ವೈ ಮಾಲತಿ, ಸತೀಶ್ ಭಟ್, ಸುಂದರ ಪೂಜಾರಿಯವರಿಗೆ ಗೌರವಾರ್ಪಣೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಮುರಲೀ ಕಡೇಕಾರ್ ಮಂಗಳ ನುಡಿಗಳನ್ನಾಡಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article