ರಚನಾ ಟ್ರೇಡ್ ಎಕ್ಸ್‌ಪೋ 2027ಕ್ಕೆ ಸಾಂಕೇತಿಕ ಚಾಲನೆ

ರಚನಾ ಟ್ರೇಡ್ ಎಕ್ಸ್‌ಪೋ 2027ಕ್ಕೆ ಸಾಂಕೇತಿಕ ಚಾಲನೆ


ಮಂಗಳೂರು: ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಇದರ ವತಿಯಿಂದ ಶನಿವಾರ ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸದಸ್ಯರ ಸಮಾವೇಶ ಹಾಗೂ ರಚನಾ ಟ್ರೇಡ್ ಎಕ್ಸ್‌ಪೋ 2027ರ ಸಾಂಕೇತಿಕ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಮೈಕಲ್ ಡಿಸೋಜಾ ಅವರು ಟ್ರೇಡ್ ಎಕ್ಸ್‌ಪೋದ ಲೋಗೋವನ್ನು ಅನಾವರಣಗೊಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿಗಳು ಭಾಗವಹಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಸದಸ್ಯರು ತಮ್ಮನ್ನು ಹಾಗೂ ತಮ್ಮ ಉದ್ಯಮಗಳನ್ನು ಪರಸ್ಪರ ಪರಿಚಯಿಸಿಕೊಳ್ಳುವ ಮೂಲಕ ಹೊಸ ವ್ಯವಹಾರಿಕ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಹೇಳಿದರು.

ಅನೇಕ ಸಾಂಪ್ರದಾಯಿಕ ಉದ್ಯಮಗಳು ಮುಚ್ಚಿಹೋಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹೊಸ ಉದ್ಯಮಗಳು ಹುಟ್ಟಿಕೊಳ್ಳುತ್ತಿರುವುದನ್ನು ಸ್ವಾಗತಿಸಿದರು ಮತ್ತು ಎಕ್ಸ್‌ಪೋಗೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದರು.

ರಚನಾ ಟ್ರೇಡ್ ಎಕ್ಸ್‌ಪೋ 2027 ಫೆಬ್ರವರಿ 26, 27 ಮತ್ತು 28ರಂದು ನಡೆಸಲು ಉದ್ದೇಶಿಸಲಾಗಿದೆ. ಎಕ್ಸ್‌ಪೋದ ಸಂಚಾಲಕರಾದ ಲೆಸ್ಲಿ ರೇಗೊ ಅವರು ಈ ಮಹತ್ವಾಕಾಂಕ್ಷಿ ಯೋಜನೆಯ ಉದ್ದೇಶವನ್ನು ವಿವರಿಸಿದರು. ಉದ್ಯಮಿಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು, ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು, ಗ್ರಾಹಕರನ್ನು ಸಂಪರ್ಕಿಸಲು ಹಾಗೂ ಹೊಸ ವ್ಯವಹಾರಿಕ ಪಾಲುದಾರಿಕೆಗಳನ್ನು ಬೆಳೆಸಲು ಈ ಎಕ್ಸ್‌ಪೋ ಉತ್ತಮ ವೇದಿಕೆಯಾಗಲಿದೆ ಎಂದು ಕಾರ್ಯಕ್ರಮದ ರಚನಾದ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೊ ಮಾಹಿತಿ ನೀಡಿದರು.

ವಾಲ್ಟರ್ ನಂದಳಿಕೆ ಅವರು ರಚನಾ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಟ್ರೇಡ್ ಫೇರ್ ಆಯೋಜಿಸುತ್ತಿರುವುದನ್ನು ಶ್ಲಾಘಿಸಿದರು.

ಡಿಯೋನ್ ಮೊಂತೆರೊ ಅವರು ಯುವಜನರು ವಿದೇಶಗಳಲ್ಲಿ ಉದ್ಯೋಗ ಹುಡುಕುವುದಕ್ಕಷ್ಟೇ ಸೀಮಿತವಾಗದೆ, ಸ್ವದೇಶದಲ್ಲಿಯೇ ಉದ್ಯಮಗಳನ್ನು ಸ್ಥಾಪಿಸುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಟ್ರೇಡ್ ಎಕ್ಸ್‌ಪೋ ಕರಪತ್ರದ ಬಿಡುಗಡೆ, ಕಾರುಗಳ ಮೇಲೆ ಅಂಟಿಸುವ ಸ್ಟಿಕ್ಕರ್‌ಗಳ ಸಾಂಕೇತಿಕ ವಿತರಣೆ ಹಾಗೂ ಎಕ್ಸ್‌ಪೋದ ಸಿದ್ಧತೆ ಮತ್ತು ಮುಂದಿನ ಕಾರ್ಯಯೋಜನೆಗಳ ಕುರಿತು ಅಧ್ಯಕ್ಷರಿಂದ ಮಾಹಿತಿ ನೀಡಲಾಯಿತು. ರಚನಾದ ಕಾರ್ಯದರ್ಶಿ ಅಲ್ರಾನ್ ರೊಡ್ರಿಗಸ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article