ಎಸ್‌ಐಆರ್ ಪ್ರಕ್ರಿಯೆ ಪಾರದರ್ಶಕ: ಕಾರ್ಯಕರ್ತರ ಮೇಲೆ ಕೇಸು ದಾಖಲು ಖಂಡನೀಯ
ಕಿನ್ನಿಗೋಳಿ: ಎಸ್‌ಐಆರ್ ಪ್ರಕ್ರಿಯೆಗಳು ಪಾರದರ್ಶಕವಾಗಿ ನಿಷ್ಪಕ್ಷವಾಗಿ ಮಾಡಲಾಗುತ್ತಿದೆ. ಮೊದಲ ಹಂತದ ಕರಡು ಪ್ರತಿ ಪ್ರಕಟವಾಗಿದೆ. ಮೃತ ಪಟ್ಟವ್ಯಕ್ತಿಯ ಹಾಗೂ ವಾಸ್ತವ್ಯ ಇಲ್ಲದೆ ಇರುವವರ ಮೊದಲ ಹಂತದಲ್ಲಿ ಕೈ ಬಿಡಲಾಗಿದೆ ಆದರೆ ಮತ್ತೆ ದಾಖಲೆ ನೀಡಿ ಸೇರ್ಪೆಡೆಗೆ ಅವಕಾಶ ಇದೆ ಆದರೆ ಕಾಂಗ್ರೆಸ್‌ನವರು ಹತಾಶ ಭಾವನೆಯಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ದಾಖಲು ಮಾಡುವುದು ಖಂಡನೀಯ ಇದನ್ನು ಖಂಡಿಸಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ದೇಶದ ಎಲ್ಲಾ ರಾಜ್ಯದಲ್ಲೂ ಎಸ್‌ಐಆರ್ ಪ್ರಕ್ರಿಯೆ ನಡೆಯಿತ್ತಿದೆ. ಕೆಲವು ರಾಜ್ಯದಲ್ಲಿ ಪ್ರಕ್ರಿಯೆ ನಡೆದು ಚುನಾವಣೆ ಆಗಿದೆ ಆದರೆ ಬಿಎಲ್‌ಒಗಳನ್ನು ಜಿಲ್ಲಾಧಿಕಾರಿಗಳೇ ನೇಮಕಮಾಡಿದ್ದು, ಪಾರದರ್ಶಕವಾಗಿ ನಡೆದರೂ ಕಾಂಗ್ರೆಸ್‌ಗರು ಇಲ್ಲಸಲ್ಲದ ಅರೋಪ ಮಾಡಿ ಬಿಜಪಿ ಕಾರ್ಯಕರ್ತೆಯರಿಗೆ ಕಿರುಕುಳ ನೀಡುವುದನ್ನು ನಾವು ಸಹಿಸುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ನಾಯಕ ಸುನೀಲ್ ಆಳ್ವ ಮಾತನಾಡಿ, ಮೊದಲ ಹಂತದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿದು ಕರಡು ಮತ ಪಟ್ಟಿಬಂದ ಮೇಲೆ ಕಾಂಗ್ರೆಸ್ ಪಕ್ಷ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಮತದಾರ ಪಟ್ಟಿಯನ್ನು ಸರಿ ಪಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಉತ್ತಮ ಕೆಲಸ ಮಾಡುತ್ತಿದೆ ಆದರೆ, ಕಾಂಗ್ರಸ್‌ನವರು ಅಕ್ಷೇಪ ಮಾಡುವುದು ಸರಿಯಲ್ಲ. ಇದರ ಬಗ್ಗೆ ನಾವು ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೂಲ್ಕಿ-ಮೂದಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್, ಬಿಜೆಪಿ ನಾಯಕರಾದ ಭುವನಾಭಿರಾಮ ಉಡುಪ, ಈಶ್ವರ್ ಕಟೀಲ್, ರಂಜಿತ್ ಪೂಜಾರಿ, ಶಾಂತಿಪ್ರಸಾದ್ ಹೆಗ್ಡೆ, ಗುರುರಾಜ ಮಲ್ಲಿಗೆಯಂಗಡಿ, ಶೋಬೆಂದ್ರ ಸಸಿಹಿತ್ಲು, ಗೀತಾ ಸೆನವ, ಕೇಶವ ಕರ್ಕೇರಾ, ಉಪಸ್ಥಿತರಿದ್ದರು.