ಹಾಲಿನ ದರ ಏರಿಕೆ-ಡಿ.ಕೆ.ಶಿ. ಕಾಂಗ್ರೆಸ್ ಸರಕಾರ ಜನರ ಸುಲಿಗೆ ಮಾಡಲು ಹೊರಟಿದೆ: ಸತೀಶ್ ಕುಂಪಲ

ಹಾಲಿನ ದರ ಏರಿಕೆ-ಡಿ.ಕೆ.ಶಿ. ಕಾಂಗ್ರೆಸ್ ಸರಕಾರ ಜನರ ಸುಲಿಗೆ ಮಾಡಲು ಹೊರಟಿದೆ: ಸತೀಶ್ ಕುಂಪಲ

ಮಂಗಳೂರು: ಕಳೆದ ಮೂರುವರೆ ವರುಷದಲ್ಲಿ ಸಿದ್ಧರಾಮಯ್ಯರವರ ಕಾಂಗ್ರೆಸ್ ಸರಕಾರ ಸ್ವಲ್ಪ ಸ್ವಲ್ಪವಾಗಿ ಬೆಲೆಯೇರಿಕೆಯ ಬರೆಯನ್ನು ಜನರಿಗೆ ಎಳೆದರೆ, ಡಿ.ಕೆ. ಶಿವಕುಮಾರ್ ಹಾಲಿನ ದರವನ್ನು ಏಕಾಏಕಿ 8 ರೂ. ಏರಿಕೆ ಮಾಡುವ ಮೂಲಕ ದೊಡ್ಡ ಬರೆಯನ್ನು ಒಂದೇ ಸಮನೆ ಹಾಕುವುದರೊಂದಿಗೆ ರಾಜ್ಯದ ಜನತೆಗೆ ನವರಾತ್ರಿಯ ಉಡುಗೊರೆ ನೀಡಿದೆ ಎಂದು ಬಿಜೆಪಿಯ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸರಕಾರ ಜನರ ನೆಮ್ಮದಿಯನ್ನು ಕೆಡಿಸಿದೆ ಆದರೂ ಮುಖ್ಯಮಂತ್ರಿಗಳು ಭಾವನೆ, ಬದುಕು ಎಂಬ ಪದಗಳನ್ನು ಬಳಸಿ ಮಾತನಾಡುತ್ತಿರುವುದು ಹಾಸ್ಯಸ್ಪದ. ಭಾವನೆಯೇ ಇಲ್ಲದ ಬದುಕಲು ಬಿಡದ ಸುಳ್ಳಿನ ಮತ್ತು ಸುಲಿಗೆ ರಾಜ್ಯ ಕಾಂಗ್ರೆಸ್ ಸರಕಾರದ್ದಾಗಿದೆ ಎಂದು ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article