ತಾಲೂಕು ಮಟ್ಟದ ಖೋ ಖೋ ಪಂದ್ಯಾಟ: ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
Wednesday, October 7, 2026
ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಖೋ ಖೋ ಪಂದ್ಯಾಟವು ನರೇಂದ್ರ ಪದವಿಪೂರ್ವ ಕಾಲೇಜು ಪುತ್ತೂರು ಇವರ ಸಹಯೋಗದಲ್ಲಿ ತೆಂಕಿಲ ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಹಾಗೂ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಶಶಾಂಕ್, ಚಂದನ್, ದಿಶಾಲ್ ಎ , ಉದಯ್ ಎಸ್ , ಥು?ನ್ ಎ , ತರುಣ್ ಎ ರೈ , ಪ್ರದ್ವಿತ್ ರೈ ಎಮ್ , ಯಶ್ವಿನ್ ಬಿ , ಜೀವಿತ್,ಎಸ್. ಡಿ ಮಸಲಿ , ಪ್ರಿಥ್ವಿರಾಜ್ ಜಿ . ದ್ವಿತೀಯ ಪಿಯುಸಿ ತರುಣ್ ಕುಮಾರ್ ಬಿ . ಆರ್ ,ದೇಶ್ಚಿತ್ ಎಸ್ ,ಘನಶ್ಯಾಮ್ ,ಲಿಖಿತ್ ,ಕೀರ್ತನ್,ಸತ್ವಿಕ್ , ಮಾನ್ವಿತ್ , ಬಾಲಕಿಯರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿನಿಯರಾದ ಸಂಗೀತ ಎಸ್. ಎಮ್ , ವಿನ್ಯಾ ರೈ , ಶ್ವೇತಶ್ರೀ, ಭೂಮಿಕಾ, ವೃಷ್ಟಿ ರೈ , ನಿದೀಕ್ಷ ಎ , ಪ್ರಣಿತಾ ಕೆ , ಹರ್ಷಿಣಿ , ವಿದ್ಯಾ ಎಮ್ , ಎಚ್ . ಡಿ ಹೇಮಾದ್ರಿ , ಸಾನ್ವಿ ಅಂಚನ ವೈ. ವೈ, ದ್ವಿತೀಯ ಪಿಯುಸಿ ವಿಂದ್ಯಾ ಎಮ್ ಆರ್, ನಳಿನ ಎ. ಬಿ , ಅನನ್ಯ ಗೌಡ ಭಾಗವಹಿಸಿರುತ್ತಾರೆ.
ವೈಯಕ್ತಿಕ ಪ್ರಶಸ್ತಿಗಳು ದ್ವಿತೀಯ ವಾಣಿಜ್ಯ ವಿಭಾಗದ ದೇಶ್ಚಿತ್ ಎಸ್( ಬೆಸ್ಟ್ ಡಿಫೆಂಡರ್) ,ಲಿಖಿತ್ (ಬೆಸ್ಟ್ ಆಲ್ ರೌಂಡರ್), ಪ್ರಥಮ ವಿಜ್ಞಾನ ವಿಭಾಗದ ವೃಷ್ಟಿ ರೈ ( ಬೆಸ್ಟ್ ಡಿಫೆಂಡರ್).
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
