ನವ್ಯ, ಬಂಡಾಯದ ಮಧ್ಯೆ ಹಾಸ್ಯ, ಹನಿಗವನಗಳು ಜನಪ್ರಿಯವಾದವು: ಎಚ್. ಡುಂಡಿರಾಜ್

ನವ್ಯ, ಬಂಡಾಯದ ಮಧ್ಯೆ ಹಾಸ್ಯ, ಹನಿಗವನಗಳು ಜನಪ್ರಿಯವಾದವು: ಎಚ್. ಡುಂಡಿರಾಜ್

ಡುಂಡಿರಾಜ್ ಜೊತೆ ಮಾತುಕತೆ


ಕಿನ್ನಿಗೋಳಿ: ನವ್ಯ ಸಾಹಿತ್ಯ, ಬಂಡಾಯ ಸಾಹಿತ್ಯದ ಮಧ್ಯೆ ಒಂದು ರಿಲೀಫ್ ಆದಂತೆ ಹಾಸ್ಯ, ಹನಿಗವನಗಳು ಬಂದವು. ದಿನಕರ ದೇಸಾಯಿಯವರ ಚುಟುಕುಗಳ ಸ್ಪೂರ್ತಿಯಿಂದ ಬರೆಯತೊಡಗಿದೆ. ಸುಬ್ರಾಯ ಚೊಕ್ಕಾಡಿಯವಂತಹವರು ಪ್ರೋತ್ಸಾಹಿಸಿದರು ಎಂದು ಖ್ಯಾತ ಕವಿ, ನಾಟಕಕಾರ ಎಚ್. ಡುಂಡಿರಾಜ್ ಹೇಳಿದರು.

ಅವರು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಆವರಣದ ಮಾವಿನ ಮರದ ಕಟ್ಟೆಯಲ್ಲಿ ನಡೆದ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂಲ್ಕಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೂಲ್ಕಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸದ ಸಂವಾದದಲ್ಲಿ ಡುಂಡಿರಾಜ್ ಜೊತೆ ಡಾ. ಸುಧಾರಾಣಿ ಮಾತುಕತೆ ನಡೆಸಿದರು.

ಹದಿನೈದಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದೇನೆ. ಕಾಯುವ ಕಾಯಕ ನಾಟಕ 130ಕ್ಕೂ ಹೆಚ್ಚು ಪ್ರದರ್ಶನ ಕಾಣುವಷ್ಟು ಜನಪ್ರಿಯವಾಗಿದೆ. ಬಾನುಲಿ ನಾಟಕಕ್ಕೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಆಕಾಶವಾಣಿಯಲ್ಲಿ ಅನೇಕ ನಾಟಕಗಳು ಪ್ರಸಾರವಾಗಿವೆ. ಅನೇಕ ವರ್ಷ ಪತ್ರಿಕೆಗಳಲ್ಲಿ ಅಂಕಣ ಬರೆದಿದ್ದೇನೆ. ಇಡಿಗವನಗನ್ನೂ ಬರೆದಿದ್ದೇನೆ. ಆದರೆ ಚುಟುಕು ಅಥವಾ ಹನಿಗವನಗಳು ಜನರಿಗೆ ಹೆಚ್ಚು ಇಷ್ಟವಾದವು ಎಂದು ತನ್ನ ಸಾಹಿತ್ಯ ರಚನೆಯ ಕುರಿತಾಗಿ ಹೇಳಿದರು ಡುಂಡಿರಾಜ್. 

ಹಾಸ್ಯದಿಂದ ಆರಂಭಿಸಿ ಗಂಭೀರ ವಿಷಯವನ್ನು ತರಲು ಪ್ರಯತ್ನಿಸಿ ಕೊನೆಗೆ ಹಾಸ್ಯದಲ್ಲೇ ಕವಿತೆ ಮುಕ್ತಾಯವಾದದ್ದೂ ಇದೆ. ಕುಡಿತದ ವಿಷಯ ಜನರಿಗೆ ಹೆಚ್ಚು ಖುಷಿ ಕೊಡುವ ಕಾರಣಕ್ಕೋ ಏನೋ ಬಾರ್, ಆಲ್ಕೋಹಾಲ್ ಕುರಿತಾದ ಚುಟುಕುಗಳು ಪ್ರಸಿದ್ದವಾದವು. ಉದ್ಯೋಗ ಮಾಡುತ್ತಿದ್ದ ಬ್ಯಾಂಕ್, ಮಹಿಳೆಯರು, ಪತ್ನಿ ಹೀಗೆ ಅನೇಕ ವಿಷಯಗಳ ಕುರಿತಾದ ಚುಟುಕುಗಳು ಜನರಿಗೆ ಇಷ್ಟವಾದವು. ಓದಿದ್ದು ಕೃಷಿ, ಉದ್ಯೋಗ ಬ್ಯಾಂಕಿನಲ್ಲಿ. ಅಕಾಡೆಮಿಕ್ ವಲಯದಿಂದ ಹೊರಗೆ ಉಳಿದಿದ್ದರಿಂದ ನನ್ನ ಬರವಣಿಗೆಯಲ್ಲಿ ತಾಜಾತನವಿದೆ ಎಂದು ವಿಮರ್ಶಕ ತಿರುಮಲೇಶ್ ಹೇಳಿದ್ದರು ಎಂದು ಡುಂಡಿರಾಜ್ ಹೇಳಿದರು.

ಜೊಸ್ಸಿ ಪಿಂಟೋ, ಉದಯಕುಮಾರ ಹಬ್ಬು, ಗುರುರಾಜ್ ಮಲ್ಲಿಗೆಯಂಗಡಿ, ಶಾಲೆಟ್ ಪಿಂಟೋ, ಪದ್ಮಲತಾ ರಾವ್, ರೆ.ಫಾ. ಜೋಕಿಂ ಫೆನಾಂಡಿಸ್, ಭುವನಾಭಿರಾಮ ಉಡುಪ, ಕಸ್ತೂರಿ ಪಂಜ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article