ಎಂಆರ್‌ಪಿಎಲ್ ದುರಂತ-ಗಾಯಾಳು ಸಾವು: 1.20 ಕೋಟಿ ಪರಿಹಾರ

ಎಂಆರ್‌ಪಿಎಲ್ ದುರಂತ-ಗಾಯಾಳು ಸಾವು: 1.20 ಕೋಟಿ ಪರಿಹಾರ


ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್)ನಲ್ಲಿ ಸೆ.30ರಂದು ನಡೆದಿದ್ದ ಸ್ಪೋಟದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಾಜೇಶ್ ಡಿಸಿಲ್ವ ಅವರು ಶನಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ರಾಜೇಶ್ ಡಿಸಿಲ್ವ ಸುರತ್ಕಲ್ ಇಡ್ಯಾ ಗ್ರಾಮದ ಕಾನ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಎಂ.ಆರ್.ಪಿ.ಎಲ್.ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಬ್ಯಾಪಿಸ್ಟ್ ಡಿಸಿಲ್ವ ಅವರ ಐವರು ಮಕ್ಕಳ ಪೈಕಿ ರಾಜೇಶ್ ಡಿಸಿಲ್ವ ಸೇರಿ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ. ರಾಜೇಶ್ ಅವಿವಾಹಿತರಾಗಿದ್ದಾರೆ.

ಎಂ ಆರ್ ಪಿ ಎಲ್ ನ ಫೇಸ್ 3ರ CHTU (Coker Hydro Treating Unit)ನ ಪ್ಲಾಂಟ್ ನಲ್ಲಿ ಸೆ.30 ರಂದು ಭಾರೀ ಸ್ಫೋಟ ಸಂಭವಿಸಿ, ಹಳೆಯಂಗಡಿ ನಿವಾಸಿ ಮನೀಶ್ ಸ್ಥಳದಲ್ಲೇ ಮೃತಪಟ್ಟಿದ್ದು, ರಾಜೇಶ್ ಡಿಸಿಲ್ವ ಗಂಭೀರ ಸುಟ್ಟಗಾಗಳಾಗಿ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

1.20 ಕೋಟಿ ಪರಿಹಾರ..

ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿರುವ ಎಂಆರ್‌ಪಿಎಲ್  ಆಡಳಿತ ಮಂಡಳಿ, ಕುಟುಂಬದ ಆರ್ಥಿಕ ಭದ್ರತೆಗಾಗಿ 90 ಲಕ್ಷ ಎಕ್ಸ್‌ಗ್ರೇಷಿಯಾ ಪರಿಹಾರ ನೀಡುವುದಾಗಿ ಘೋಷಿಸಿದೆ. ಇತರ ಪರಿಹಾರಗಳನ್ನು ಒಳಗೊಂಡಂತೆ ಒಟ್ಟು 1.20 ಕೋಟಿ ಪರಿಹಾರ ಪ್ಯಾಕೇಜ್ ನೀಡಲಾಗುವುದು ಎಂದು ಸಂಸ್ಥೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article