‘ಹೈಕೋರ್ಟ್ ಪೀಠಕ್ಕಾಗಿ ಸರ್ವರೂ ಒಗ್ಗೂಡಬೇಕು’: ವಕೀಲ ಎಂ.ಪಿ ನೊರೋನ್ಹ

‘ಹೈಕೋರ್ಟ್ ಪೀಠಕ್ಕಾಗಿ ಸರ್ವರೂ ಒಗ್ಗೂಡಬೇಕು’: ವಕೀಲ ಎಂ.ಪಿ ನೊರೋನ್ಹ

ಮಂಗಳೂರು: ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಎಲ್ಲ ಸ್ತರದ ಜನರು ಒಂದಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯ ಅಗತ್ಯವನ್ನು ನ್ಯಾಯಾಲಯ ಸ್ಥಾಪಿಸಿದ ಸಮಿತಿಯ ಮುಂದಿಡಬೇಕು ಎಂದು ವಕೀಲ ಎಂ.ಪಿ ನೊರೋನ್ಹ ಹೇಳಿದರು. 

ಯುನೈಟೆಡ್ ಲೀಗಲ್ ರಿಸರ್ಚ್ ಆಂಡ್ ಜಸ್ಟೀಸ್ ಟ್ರಸ್ಟ್ ನಗರದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಸಂಚಾರಿ ಪೀಠಕ್ಕಾಗಿ 18 ವರ್ಷಗಳಿಂದ ಈ ಭಾಗದ ಜನರು ಮೊರೆ ಇಡುತ್ತಿದ್ದಾರೆ. ಈ ಹೋರಾಟವು ಈಗ ಎರಡನೇ ಘಟ್ಟ ತಲುಪಿದೆ. ಹಕ್ಕು ಮಂಡಿಸುವಲ್ಲಿ ಯಶಸ್ವಿಯಾಗಿರುವ ನಾವು ಸಮಿತಿ ಸದಸ್ಯರ ಮನವೊಲಿಸಲು ಮುಂದಾಗಬೇಕು ಎಂದರು.

ಅಳಿಯ ಸಂತಾನದಂಥ ವಿಶಿಷ್ಟ ಆಚರಣೆ, ಮೂಲಗೇಣಿ, ಕುಮ್ಕಿ ಹಕ್ಕು ಇತ್ಯಾದಿ ಭೂದಾಖಲೆಗಳಿಗೆ ಸಂಬಂಧಿಸಿದ ಪ್ರಕರಣಗಳು ಇಲ್ಲಿಗೆ ವಿಶಿಷ್ಟವಾಗಿವೆ. ಅದನ್ನು ಸಮಿತಿ ಸದಸ್ಯರಿಗೆ ತಿಳಿಸಬೇಕು. 3,21,240 ಪ್ರಕರಣಗಳು ಹೈಕೋರ್ಟ್ನಲ್ಲಿ ಉಳಿದಿವೆ. ಅದು ನ್ಯಾಯಾಲಯದ ಮೇಲೆ ಹಾಕಿರುವ ಭಾರ ಎಷ್ಟೆಂಬುದನ್ನು ತಿಳಿಯಪಡಿಸಬೇಕು ಎಂದರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಮಾತನಾಡಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಸಂಬಂಧಿಸಿ ಉಳಿಸಿರುವ ವ್ಯಾಜ್ಯಗಳನ್ನು ಮುಗಿಸಲು ಹೈಕೋರ್ಟ್‌ಗೆ ಕನಿಷ್ಠ 10 ವರ್ಷಗಳು ಬೇಕು. ಆದ್ದರಿಂದ ಪಕ್ಷ ಭೇದ ಮರೆತು ಹೈಕೋರ್ಟ್ ಸಂಚಾರಿ ಪೀಠಕ್ಕಾಗಿ ಹೋರಾಡಬೇಕು ಎಂದರು. ಶಾಸಕ ಐವನ್ ಡಿಸೋಜ, ಯುನೈಟೆಡ್ ಲೀಗಲ್ ರಿಸರ್ಚ್ ಆಂಡ್ ಜಸ್ಟೀಸ್ ಟ್ರಸ್ಟ್ ಅಧ್ಯಕ್ಷ ಬಿ.ಇಬ್ರಾಹಿಂ ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article