ಅಕ್ರಮ ಕೋಳಿ ಅಂಕ: ಓರ್ವನ ಬಂಧನ, 12 ಕೋಳಿ ವಶಕ್ಕೆ
Tuesday, October 20, 2026
ಮಂಗಳೂರು: ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಎರ್ಮುಡೆ ಎಂಬಲ್ಲಿ ಅ.18 ರಮದು ಕೋಳಿ ಅಂಕದ ಜೂಜಾಟ ನಡೆಯುತ್ತಿದ್ದು, ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಪಡಿಸಿಕೊಂಡಿದ್ದು, ಜೂಜಾಟಕ್ಕೆ ಬಳಸಿದ 12 ಕೋಳಿಗಳನ್ನು ಪಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಬಂಟ್ವಾಳ ಬಿ ಮೂಡ ಗ್ರಾಮದ ನಿವಾಸಿ ಗಣೇಶ್ (33) ಎಂದು ಗುರುತಿಸಲಾಗಿದೆ.
ಬಂಟ್ವಾಳದ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರ ತಂಡ ದಾಳಿ ನಡೆಸಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದವರು ಪರಾರಿಯಾಗಿದ್ದು, ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿದ್ದ 12 ಅಂಕದ ಕೋಳಿಗಳನ್ನು, ಕೋಳಿ ಅಂಕಕ್ಕೆ ಬಳಸುವ ಕತ್ತಿ ಹಾಗೂ 1,100 ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.