'ನರವಿಜ್ಞಾನ ಕೇಂದ್ರಿತ ಕಲಿಕೆ' ತರಬೇತಿ ಕಾರ್ಯಕ್ರಮ

'ನರವಿಜ್ಞಾನ ಕೇಂದ್ರಿತ ಕಲಿಕೆ' ತರಬೇತಿ ಕಾರ್ಯಕ್ರಮ


ಮಂಜೇಶ್ವರ: ಮಂಜೇಶ್ವರದ ಇನ್ಫ್ಯಾಂಟ್ ಜೇಸಸ್ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೆ 'ನರವಿಜ್ಞಾನ ಕೇಂದ್ರಿತ ಕಲಿಕೆ'ಯ  ವಿಷಯದಲ್ಲಿ ಗಿಳಿವಿಂಡು ವತಿಯಿಂದ ತರಬೇತಿ ಕಾರ್ಯಕ್ರಮ ನಡೆಯಿತು.


ಬದಲಾಗುತ್ತಿರುವ ಶೈಕ್ಷಣಿಕ ಪರಿಸರ, ಮಕ್ಕಳ ಆಲೋಚನಾ ಕ್ರಮ, ಗ್ರಹಿಕಾ ವಿಧಾನ ಇವೆ ಮುಂತಾದ ಕ್ಷೆತ್ರಗಳಲ್ಲಿ ನಡೆಯುತ್ತಿರುವ ಇತ್ತೀಚಿನ ಸಂಶೋಧನೆಗಳನ್ನು ಗಮನದಲ್ಲಿರಿಸಿ ತರಗತಿಯಲ್ಲಿ ಬೋಧನಾ ವಿನ್ಯಾಸವನ್ನು ರೂಪಿಸಿಕೊಳ್ಳುವ ಮೂಲಕ ಕಲಿಕೆಯನ್ನು ಹೇಗೆ ಆಸಕ್ತಿದಾಯಕವಾಗಿಸಬೇಕು ಎಂದು ತಿಳಿಸಲಾಯಿತು.


ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಿಕೆ ಡಾ. ರಾಜಲಕ್ಷ್ಮಿ ಇವರು ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗಿಲಿವಿಂಡು ಕಾರ್ಯದರ್ಶಿ, ಉಳಿದ ಸಿಬಂಧಿಗಳು ಸಹಕರಿಸಿದರು. ಶಾಲೆಯ ಮುಖ್ಯಾಧಿಪಿಕೆ ಉಷಾ ಹಾಗೂ ಸಂಸ್ಥೆಯ ಮುಖ್ಯಸ್ಥ ಫಾದರ್ ಎಡ್ವಿನ್ ತರಬೇತಿ ವ್ಯವಸ್ಥೆ ಮಾಡಿದ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಹಾಗೂ ತರಬೇತಿ ನೀಡಿದ ಡಾ ರಾಜಲಕ್ಷ್ಮಿ ಎನ್. ಕೆ. ಅವರಿಗೆ ಕೃತಜ್ಞತೆ ಸಲ್ಲಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article