ನ.21, 22 ರಂದು ಮಂಗಳೂರಿಗೆ ಸ್ವಾಮಿ ಸರ್ವಪ್ರಿಯಾನಂದಜಿ ಮಹಾರಾಜ್‌ರ ಭೇಟಿ

ನ.21, 22 ರಂದು ಮಂಗಳೂರಿಗೆ ಸ್ವಾಮಿ ಸರ್ವಪ್ರಿಯಾನಂದಜಿ ಮಹಾರಾಜ್‌ರ ಭೇಟಿ

ಮಂಗಳೂರು: ಅಮೆರಿಕಾದ ನ್ಯೂಯಾರ್ಕ್‌ನ ವೇದಾಂತ ಸೊಸೈಟಿಯ ಮುಖ್ಯಸ್ಥರು ಹಾಗೂ ಆಧ್ಯಾತ್ಮಿಕ ಮಾರ್ಗದರ್ಶಕರಾದ ಸ್ವಾಮಿ ಸರ್ವಪ್ರಿಯಾನಂದಜಿ ಮಹಾರಾಜ್‌ರು ನ.21 ಮತ್ತು 22ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. 

ಈ ಸಂದರ್ಭದಲ್ಲಿ ರಾಮಕೃಷ್ಣ ಮಠ ಮತ್ತು ಮಿಷನ್, ಮಂಗಳೂರು ವತಿಯಿಂದ PRABODHA '26: Awakening Minds ? Enriching Lives ಶೀರ್ಷಿಕೆಯಡಿ ವಿಶೇಷ ಉಪನ್ಯಾಸಗಳ ಸರಣಿ ನಡೆಯಲಿದೆ.

12 ವರ್ಷಗಳ ವಿರಾಮದ ನಂತರ ಸ್ವಾಮೀಜಿಯವರು ಮಂಗಳೂರಿಗೆ ಆಗಮಿಸುತ್ತಿದ್ದು, ವಿದ್ಯಾರ್ಥಿಗಳು, ವೃತ್ತಿಪರರು, ವೈದ್ಯಕೀಯ ವಿದ್ಯಾರ್ಥಿಗಳು, ಭಕ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ವೇದಾಂತದ ದೃಷ್ಟಿಕೋನದಲ್ಲಿ ಸಮಕಾಲೀನ ಸವಾಲುಗಳು ಮತ್ತು ಜೀವನದ ಶಾಶ್ವತ ಮೌಲ್ಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ರಾಮಕೃಷ್ಣ ಮಠ, ಮಂಗಳೂರು, ಕಾರ್ಯಾಲಯವನ್ನು ದೂರವಾಣಿ 0824-2414412/ 9448489399 ಸಂಪರ್ಕಿಸಬಹುದು. ಕಾರ್ಯಕ್ರಮದ ವಿವರಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ www.mangaloremath.iಟಿ ಜಾಲತಾಣವನ್ನು ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article