ಕುಕ್ಕೆ ಶ್ರೀ ಸುಬ್ರಹ್ಮಣ್ಯ: ಸೇವೆಗಳ ದರ ಪರಿಷ್ಕರಣೆ-ಬೆಳ್ಳಿ ರಥ ಸೇವೆಗೆ 12,000, ಪಂಚಾಮೃತ ಮಹಾಭಿಷೇಕ 11,000
Thursday, October 22, 2026
ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಎರಡು ಸೇವೆಗಳ ಪರಿಷ್ಕರಣೆ ನಡೆಸಲಾಗಿದೆ. ಹೊಸದಾಗಿ ಆರಂಭವಾದ ಬೆಳ್ಳಿ ರಥ ಸೇವೆಗೆ 12,000, ಪಂಚಾಮೃತ ಮಹಾಭಿಷೇಕ ಸೇವೆಗೆ 11,000 ಧರ ನಿಗದಿ ಮಾಡಲಾಗಿದೆ.
ಪಂಚಾಮೃತ ಮಹಾಭಿಷೇಕ ಸೇವೆಗೆ ಈ ಹಿಂದೆ 6,000 ಸಾವಿರ ಇದ್ದು ಪರಿಷ್ಕೃತ ದರ 11,000 ಸಾವಿರಕ್ಕೆ ಏರಿಸಲಾಗಿದೆ. ಬೆಳ್ಳಿ ರಥೋತ್ಸವ ಸೇವೆಯನ್ನು ಹೊಸದಾಗಿ ಆರಂಭಿಸಲಾಗಿದ್ದು, ಕಾರ್ತಿಕ ಮಾಸದ ಶುದ್ದ ಷಷ್ಠಿಯಿಂದ ಜ್ಯೇಷ್ಠ ಮಾಸದ ಶುದ್ದ ಷಷ್ಠಿಯವರೆಗೆ ಪ್ರತಿ ತಿಂಗಳ ಶುದ್ದ ಬಿದಿಗೆ, ಬಹುಳ ಬಿದಿಗೆ, ಶುದ್ದ ಚೌತಿ, ಬಹುಳ ಚೌತಿ, ಶುದ್ದ ಷಷ್ಠಿ, ಬಹುಳ ಷಷ್ಠಿ, ಶುದ್ದ ನವಮಿ, ಬಹುಳ ನವಮಿ, ಶುದ್ದ ಚರ್ತುದಶಿ, ಬಹುಳ ಚರ್ತುದಶಿ, ಈ ಹತ್ತು ದಿನಗಳಲ್ಲಿ ಹರಿಕೆ ಸೇವೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೆಳ್ಳಿ ರಥೋತ್ಸವ ಸೇವೆ ನಡೆಯುವ ದಿನ ಭಂಡಿ ರಥೋತ್ಸವ ಸೇವೆ ನಡೆಯುವುದಿಲ್ಲ. ಬೀದಿ ಉತ್ಸವ ನಡೆಯುವ ದಿವಸ ಬೆಳ್ಳಿ ರಥೋತ್ಸವ ಸೇವೆ ಇರುವುದಿಲ್ಲ ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.