ಸೇತುವೆ ದುರಸ್ತಿ: ಸಂಚಾರ ಮಾರ್ಗ ಬದಲಾವಣೆ
Thursday, October 22, 2026
ಮಂಗಳೂರು: ಸುಳ್ಯ ವಿಧಾನ ಸಭಾ ಕ್ಷೇತ್ರದ ಸುಳ್ಯ-ಆಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ.0.80 ರಲ್ಲಿನ ಪಯಸ್ವಿನಿ ನದಿಯ ಸೇತುವೆಯ ದುರಸ್ಥಿ ಕೆಲಸದ ಪ್ರಯುಕ್ತ ಅಕ್ಟೋಬರ್ 19 ರಿಂದ ನವೆಂಬರ್ 30 ರವರೆಗೆ ಆಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ ಮತ್ತು ಆಲೆಟ್ಟಿ-ಕೊಲ್ಚಾರು-ಕಣಕ್ಕೂರು-ಬಂದ್ಯಡ್ಕ ಹಾಗೂ ಕೇರಳ ಭಾಗಕ್ಕೆ ಸಂಚರಿಸುವ ವಾಹನಗಳು ಜಿಲ್ಲಾ ಮುಖ್ಯ ರಸ್ತೆಯಾದ ಸುಳ್ಯ-ಕಾಂತಮಂಗಲ-ಅಜ್ಜಾವರ-ಮಂಡೆಕೋಲು-ಕನ್ಯಾನ ಮಾರ್ಗವಾಗಿ ಮತ್ತು ನಾರ್ಕೋಡು-ಅಜ್ಜಾವರ ಗ್ರಾಮೀಣ ರಸ್ತೆ ಮೂಲಕ ಸಂಚರಿಸುವಂತೆ ಹಾಗೂ ಆ ಭಾಗಗಳಿಂದ ಸುಳ್ಯಕ್ಕೆ ಬರುವ ವಾಹನಗಳು ಸಹ ಇದೇ ಮಾರ್ಗವಾಗಿ ಸಂಚರಿಸುವಂತೆ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶಿಸಿದ್ದಾರೆ.