ಎಂಆರ್‌ಪಿಎಲ್ ದುರಂತ: ಪರಿಹಾರದ ಚೆಕ್ ವಿತರಣೆ
Thursday, October 22, 2026
ಮಂಗಳೂರು: ಎಂ.ಆರ್.ಪಿ.ಎಲ್.ನಲ್ಲಿ ಸೆ.30ರಂದು ನಡೆದ ಭಾರೀ ಸ್ಪೋಟ ಪ್ರಕರಣದಲ್ಲಿ ಮೃತಪಟ್ಟಿದ್ದ ದಿ.ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಎಂ.ಆರ್.ಪಿ.ಎಲ್. ವತಿಯಿಂದ ಗುರುವಾರ ಪರಿಹಾರದ ಚೆಕ್‌ನ್ನು ವಿತರಿಸಲಾಯಿತು.
ಮೂಡಬಿದ್ರೆ ಶಾಸಕರಾದ ಉಮಾನಾಥ್ ಕೋಟ್ಯಾನ್, ಎಂಅರ್ ಪಿಎಲ್ ಸಂಸ್ಥೆಯ ಎಚ್ ಆರ್ ವಿಭಾಗದ ಜಿ.ಜಿ.ಎಂ. ಪ್ರಶಾಂತ್ ಪುದುವಾಳ್ ಅವರು ಎಂ.ಆರ್.ಪಿ.ಎಲ್.ನ 90 ಲಕ್ಷದ ಚೆಕ್ ಹಾಗೂ ಒಬ್ಬನಿಗೆ ಟ್ರಸ್ಟ್ ನಲ್ಲಿ ಉದ್ಯೋಗ ನೀಡುವ ಅಪಾಯಿಂಟ್ ಮೆಂಟ್ ಲೇಟರ್ ಅನ್ನು ದಿ. ಮನೀಶ್ ಕರ್ಕಡ ಅವರ ತಂದೆಗೆ ಹಸ್ತಾಂತರಿಸಿದರು.
ಎಂ.ಆರ್.ಪಿ.ಎಲ್. ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಶರತ್ ಜೋಗಿ, ಪ್ರಧಾನ ಕಾರ್ಯದರ್ಶಿ ಸಾಯಿಪೃಥ್ವಿ, ಕರ್ಮಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಅಂಚನ್, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್, ಜೊತೆ ಕಾರ್ಯದರ್ಶಿ ಸುನೀಲ್, ಕೋಶಾಧಿಕಾರಿ ಪುರುಷೋತ್ತಮ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಂತೋಷ್ ಪೂಂಜ ಮೊದಲಾದವರಿದ್ದರು.