ತ್ರಿಶಾ ಕಾಲೇಜಿನಲ್ಲಿ ಹೊಸ ಕ್ಯಾಂಪಸ್ನ 2ನೇ ವಾರ್ಷಿಕೋತ್ಸವ: ಶಾರದಾ ಪೂಜೆ, ದಾಂಡಿಯಾ ರಾಸ್ನೊಂದಿಗೆ ಸಂಭ್ರಮ
Saturday, October 17, 2026
ಮಂಗಳೂರು: ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಹಾಗೂ ತ್ರಿಶಾ ಸಂಧ್ಯಾ ಕಾಲೇಜಿನ ಹೊಸ ಕ್ಯಾಂಪಸ್ ಆರಂಭಗೊಂಡ 2ನೇ ವಾರ್ಷಿಕೋತ್ಸವ ಅ.16 ರಂದು ಕಾಲೇಜು ಆವರಣದಲ್ಲಿ ಶಾರದಾ ಪೂಜೆ ಮತ್ತು ದಾಂಡಿಯಾ ರಾಸ್ ಕಾರ್ಯಕ್ರಮಗಳೊಂದಿಗೆ ಉತ್ಸಾಹದಿಂದ ಆಚರಿಸಲಾಯಿತು.
ಸಾಂಪ್ರದಾಯಿಕ ಭಕ್ತಿ, ಹಬ್ಬದ ಗರ್ಬಾ ನೃತ್ಯ ಹಾಗೂ ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆಯ ಸುಂದರ ಸಂಗಮದೊಂದಿಗೆ ಈ ಮೈಲಿಗಲ್ಲನ್ನು ಸಂಭ್ರಮಿಸಲಾಯಿತು.
‘ಶಾರದಾ ದೇವಿಯ ಆಶೀರ್ವಾದ ಎಲ್ಲರಿಗೂ ಜ್ಞಾನ, ಸಂತೋಷ ಮತ್ತು ಯಶಸ್ಸನ್ನು ತರಲಿ’ ಎಂಬ ಆಶಯದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು. ‘ಸಂಸ್ಕೃತಿ ನಮ್ಮನ್ನು ಬೆಸೆಯುತ್ತದೆ’ ಎಂಬುದು ಕಾರ್ಯಕ್ರಮದ ಘೋಷವಾಕ್ಯವಾಗಿತ್ತು.
ಕಾರ್ಯಕ್ರಮವು ಬೆಳಗ್ಗೆ 9:30ಕ್ಕೆ ಶಾರದಾ ಪೂಜೆ, ಔಪಚಾರಿಕ ಉದ್ಘಾಟನೆ ಮತ್ತು ಸಾಂಪ್ರದಾಯಿಕ ವಿಧಿಗಳೊಂದಿಗೆ ದಿನದ ಕಾರ್ಯಕ್ರಮ ಆರಂಭವಾಯಿತು. ನಂತರ ಭಜನಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 11 ಗಂಟೆಯಿಂದ ದಾಂಡಿಯಾ ರಾಸ್ನಲ್ಲಿ ವಿದ್ಯಾರ್ಥಿಗಳ ಗುಂಪು ದಾಂಡಿಯಾ ಅಂತರ-ತರಗತಿ ಸ್ಪರ್ಧೆ ಹಾಗೂ ಉಲ್ಲಾಸಭರಿತ ಏಕವ್ಯಕ್ತಿ ಪ್ರದರ್ಶನಗಳು ನಡೆದವು.
ಆಕರ್ಷಕ ಸ್ಪಾಟ್ ಗೇಮ್ಸ್ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಿದ ನಂತರ, ಜ್ಞಾನವರ್ಧಕ ಸಾಂಸ್ಕೃತಿಕ ಪ್ರದರ್ಶನ ಹಾಗೂ ಪೌರಾಣಿಕ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಸಮಾರೋಪ ಮತ್ತು ಬಹುಮಾನ ವಿತರಣೆ: ಪದವಿ ವಿಭಾಗದ ವಿದ್ಯಾರ್ಥಿಗಳು. ಗುಂಪು ದಾಂಡಿಯಾ ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದ ಪ್ರದರ್ಶನ ನೀಡಿದರು. ವಾರ್ಷಿಕೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ವಿಜೇತರಾದ ಸ್ಪರ್ಧಿಗಳನ್ನು ಗುರುತಿಸುವ ಬಹುಮಾನ ವಿತರಿಸಲಾಯಿತು.










