ಅ.30ರೊಳಗೆ ಬ್ಲಾಕ್, ಘಟಕಗಳಿಗೆ ಪದಾಧಿಕಾರಿಗಳ ನೇಮಕ: ಡಾ. ಅಂಶುಮ್ನಾಥ್

ಅ.30ರೊಳಗೆ ಬ್ಲಾಕ್, ಘಟಕಗಳಿಗೆ ಪದಾಧಿಕಾರಿಗಳ ನೇಮಕ: ಡಾ. ಅಂಶುಮ್ನಾಥ್


ಮಂಗಳೂರು: ಸೃಜನ್ ಸಂಘಟನ್ ಅಭಿಯಾನ್-1ರಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ ನಡೆಸಿದ ಬಳಿಕ ಈಗ ಅಭಿಯಾನ್-2 ಆರಂಭವಾಗಿದ್ದು, ಅಕ್ಟೋಬರ್ 30ರೊಳಗೆ ಎಲ್ಲ ಬ್ಲಾಕ್ ಹಾಗೂ ಇತರೆ ಘಟಕಗಳಲ್ಲಿ ಪದಾಧಿಕಾರಿಗಳ ನೇಮಕ, ಬದಲಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಅಭಿಯಾನ್-2 ದ.ಕ. ಜಿಲ್ಲಾ ವೀಕ್ಷಕ ಡಾ. ಅಂಶುಮ್ನಾಥ್ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪಕ್ಷದ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದ.ಕ. ಜಿಲ್ಲೆಯ ಎಲ್ಲ 8 ಅಸೆಂಬ್ಲಿ ಕ್ಷೇತ್ರಗಳ 17 ಬ್ಲಾಕ್‌ಗಳಿಗೆ ಭೇಟಿ ನೀಡಿ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ಅಭಿಪ್ರಾಯ ಸಂಗ್ರಹಿಸಲಾಗುವುದು. 5 ವರ್ಷಕ್ಕಿಂತ ಹೆಚ್ಚಿನ ಅವಧಿ ಅಧ್ಯಕ್ಷರಾಗಿರುವಲ್ಲಿ ಹೊಸ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ. ಅಲ್ಲದೆ ಅನಿವಾರ್ಯವಾದ ಕಡೆಗಳಲ್ಲೂ ಹೊಸ ಅಧ್ಯಕ್ಷರ ನೇಮಕ ನಡೆಯಲಿದೆ. ಇದಲ್ಲದೆ ಎಸ್‌ಸಿ ಎಸ್‌ಟಿ, ಅಲ್ಪಸಂಖ್ಯಾತ, ಒಬಿಸಿ ಸೆಲ್‌ಗಳ ಪದಾಧಿಕಾರಿಗಳ ನೇಮಕಾತಿಯೂ ನಡೆಯಲಿದೆ. ಕನಿಷ್ಠ 3ರಿಂದ 5 ಮಂದಿಯ ಹೆಸರುಗಳನ್ನು ಕೆಪಿಸಿಸಿಗೆ ಶಿಫಾರಸು ಮಾಡಲಾಗುವುದು. ಕೆಪಿಸಿಸಿ ಅಂತಿಮ ಆಯ್ಕೆ ನಡೆಸಲಿದೆ ಎಂದರು.

ಅಧ್ಯಕ್ಷರ ನೇಮಕ..

ಪಕ್ಷ ಸಂಘಟನೆಯನ್ನು ತಳಮಟ್ಟದಲ್ಲಿ ಗಟ್ಟಿಯಾಗಿ ಮಾಡಲು ಪ್ರತಿ ಪಂಚಾಯ್ತಿಗೆ, ಬೂತ್‌ಗೆ ಸಮಿತಿ ರಚಿಸಿ ಅಧ್ಯಕ್ಷರ ನೇಮಕ ಮಾಡಲಾಗುವುದು. ಪಕ್ಷದ ಸೈದ್ಧಾಂತಿಕ ಬದ್ಧತೆ ಮತ್ತು ಸರ್ಕಾರದ ವಿಚಾರಗಳನ್ನು ಜನತೆಗೆ ತಲುಪಿಸಲು ಈ ಸಮಿತಿಗಳು ಕಾರ್ಯಪ್ರವೃತ್ತರಾಗಲಿವೆ ಎಂದರು.

ರಾಹುಲ್ ಗಾಂಧಿ ನೇತೃತ್ವದಲ್ಲಿ ಕೇಂದ್ರದಲ್ಲಿ ಸರ್ಕಾರ ಹಾಗೂ ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಆಡಳಿತಕ್ಕಾಗಿ ಪಕ್ಷದ ಮುಖಂಡರ ಸಭೆಗಳನ್ನು ಆಗಿಂದಾಗ್ಯೆ ನಡೆಸಲಾಗುವುದು. ಸೃಜನ್ ಸಂಘಟನ್ ಅಭಿಯಾನ್-2ರ ಮೊದಲ ಹಂತದ ಸಭೆ ಅ. 8ರಂದು ಆರಂಭವಾಗಲಿದ್ದು, ಸುಳ್ಯ, ಕಡಬ, ಪುತ್ತೂರು ಸೇರಿದಂತೆ ಎಲ್ಲ ಬ್ಲಾಕ್‌ಗಳಲ್ಲೂ ನಡೆಯಲಿದೆ ಎಂದರು.

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಪೂಜಾರಿ, ಅಭಿಯಾನ್‌ನ ಸದಸ್ಯರಾದ ಸತೀಶ್, ಸದಾಶಿವ, ಫರ್ಝಾನ, ಸುಧೀರ್ ಕೆ.ಟಿ., ಅಪ್ಪಿ, ಶುಭೋದಯ ಆಳ್ವ, ನವಾಜ್, ಭರತೇಶ್, ಯೋಗೀಶ್ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article