ಮಂಗಳೂರಿನಲ್ಲಿ 5ನೇ ವರ್ಷದ “ಪಿಲಿ ಅಜನೆ” ಆಮಂತ್ರಣ ಪತ್ರಿಕೆ ಬಿಡುಗಡೆ
Tuesday, October 6, 2026
ಮಂಗಳೂರು: ಮಂಗಳೂರಿನಲ್ಲಿ 5ನೇ ವರ್ಷದ “ಪಿಲಿ ಅಜನೆ” ಹುಲಿ ಕುಣಿತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕುದ್ರೋಳಿ ಶ್ರೀ ಭಗವತಿ ದೇವಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.
ಮಂಗಳೂರು ನಗರದ ದೀಪಾ ಕಂಫರ್ಟ್ಸ್ ಸಮೀಪ ಶ್ರೀ ಪ್ರಮೋದ್ ಕರ್ಕೇರ ಹಾಗೂ ಪಿಲಿ ಅಜನೆ ತಂಡದ ನೇತೃತ್ವದಲ್ಲಿ ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿರುವ “ಪಿಲಿ ಅಜನೆ” ವಿನೂತನ ಕಾರ್ಯಕ್ರಮವು ಇದೀಗ 5ನೇ ಆವೃತ್ತಿಗೆ ಕಾಲಿಟ್ಟಿದೆ. ಕಳೆದ ನಾಲ್ಕು ವರ್ಷಗಳಿಂದ ಮಂಗಳೂರಿನ ಹಲವು ಹೆಸರಾಂತ ಹುಲಿ ಕುಣಿತ ತಂಡಗಳ ಭರ್ಜರಿ ಪ್ರದರ್ಶನದ ಮೂಲಕ ಜನಮನ ಗೆದ್ದಿರುವ “ಪಿಲಿ ಅಜನೆ” ಕಾರ್ಯಕ್ರಮವು ಈ ಬಾರಿಯೂ ಅದ್ಧೂರಿಯಾಗಿ ನಡೆಯಲಿದೆ. ಹೆಸರಾಂತ ಹುಲಿ ಕುಣಿತ ತಂಡಗಳಿಂದ ಆಕರ್ಷಕ ಹಾಗೂ ರೋಮಾಂಚನಕಾರಿ ಪ್ರದರ್ಶನಗಳು ನಡೆಯಲಿವೆ.
ಅಕ್ಟೋಬರ್ 21ರಂದು ಬುಧವಾರ “ಪಿಲಿ ಅಜನೆ” ಕಾರ್ಯಕ್ರಮ ನಡೆಯಲಿದ್ದು, ಹುಲಿ ಕುಣಿತ ಪ್ರದರ್ಶನಕ್ಕೂ ಮುನ್ನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಆಮಂತ್ರಣ ಪತ್ರಿಕೆ ಬಿಡುಗಡೆಗೂ ಮುನ್ನ ಕುದ್ರೋಳಿ ಶ್ರೀ ಭಗವತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ನೇತೃತ್ವ ವಹಿಸಿರುವ ಪ್ರಮೋದ್ ಕರ್ಕೇರ, ಪ್ರೇಮ್ ಸಾಲ್ಯಾನ್, ಹಿತೇಶ್ ಬೇಕಲ್, ಕಾರ್ತಿಕ್, ರಕ್ಷಿತ್ ಆರ್. ಪೂಜಾರಿ, ಯಶ್ಪಾಲ್ ಸಾಲ್ಯಾನ್, ರಂಜಿತ್, ಹರ್ಷಿತ್, ಆಶೀಶ್, ಅನುಷ್, ಶಾರುಲ್, ಪ್ರದೀಪ್ ಸೇರಿದಂತೆ ಪಿಲಿ ಅಜನೆ ತಂಡದ ಸದಸ್ಯರು ಉಪಸ್ಥಿತರಿದ್ದರು.
