ದಸರಾ ಸಿಎಂ ಕಪ್ ವುಶು ಚಾಂಪಿಯನ್‌ಶಿಪ್: ಮಂಗಳೂರಿಗೆ 8 ಪದಕ

ದಸರಾ ಸಿಎಂ ಕಪ್ ವುಶು ಚಾಂಪಿಯನ್‌ಶಿಪ್: ಮಂಗಳೂರಿಗೆ 8 ಪದಕ


ಮಂಗಳೂರು: ಮೈಸೂರಿನಲ್ಲಿ ನಡೆದ ದಸರಾ ಸಿಎಂ ಕಪ್ ವುಶು ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಕನ್ನಡ ವುಶು ಅಸೋಸಿಯೇಷನ್ ಪ್ರತಿನಿಧಿಸಿದ ಟೀಮ್ ಇಮ್ಮೋರ್ಟಲ್ಸ್ ತಂಡವು ಉತ್ತಮ ಸಾಧನೆ ಮಾಡಿದ್ದು, ಒಟ್ಟು 8 ಪದಕಗಳನ್ನು ತನ್ನದಾಗಿಸಿಕೊಂಡಿದೆ.

ತಂಡದ ಕ್ರೀಡಾಪಟುಗಳು 3 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಪ್ರತೀಕ್, ಸಾನ್ಸಿಯಾ ಹಾಗೂ ಪ್ರಜ್ವಲ್ ಅವರು ಬೆಳ್ಳಿ ಪದಕ, ಶಿಫಾ, ಮಿಫಾ, ರಮೇಶ್, ತೇಜಸ್ ಹಾಗೂ ಸೆನಾನ್ ಅವರು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಇದೇ ಸ್ಪರ್ಧೆಯಲ್ಲಿ ಆರ್. ಡೇನಿಯಲ್, ಜಯಶ್ರೀ ಡಿ. ಹಾಗೂ ರೋಹನ್ ಎಸ್. ಅವರು ರಾಜ್ಯಮಟ್ಟದ ತಾಂತ್ರಿಕ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article