ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಶಿಷ್ಯ ವೇತನಕ್ಕೆ ನೃತ್ಯೋಪಾಸನಾ ವಿದ್ಯಾರ್ಥಿನಿ ಭಾರತಿ ಎಂ. ಆಯ್ಕೆ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಶಿಷ್ಯ ವೇತನಕ್ಕೆ ನೃತ್ಯೋಪಾಸನಾ ವಿದ್ಯಾರ್ಥಿನಿ ಭಾರತಿ ಎಂ. ಆಯ್ಕೆ


ಪುತ್ತೂರು: ನೃತ್ಯೋಪಾಸನಾ ಕಲಾ ಅಕಾಡೆಮಿ (ರಿ.) ಪುತ್ತೂರು ಇದರ ನೃತ್ಯ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ಶಿಷ್ಯೆ ಭಾರತಿ ಎಂ. ಇವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇದರ 2026-27ನೇ ಸಾಲಿನ ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾರೆ. 

ಭಾರತಿ ಎಂ. ಇವರು ಕಡಬ ತಾಲೂಕಿನ ಕನಕವನ ನಿವಾಸಿ ಎಂ. ಮಾಧವ ಭಟ್ ಹಾಗೂ ಗಾಯತ್ರಿ ದಂಪತಿ ಪುತ್ರಿ. 

ವಿದ್ವತ್ ಪೂರ್ವ ಪರೀಕ್ಷೆಯನ್ನು ಪೂರ್ಣಗೊಳಿಸಿರುವ ಇವರು ಕಳೆದ 12 ವರ್ಷಗಳಿಂದ ನೃತ್ಯೋಪಾಸನಾ ಅಕಾಡೆಮಿಯಲ್ಲಿ ನೃತ್ಯ ಕಲಿಯುತ್ತಿದ್ದಾರೆ. ಇತ್ತೀಚಿಗಷ್ಟೇ ರಂಗಪ್ರವೇಶವನ್ನು ಮಾಡಿರುವ ಇವರು ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿಯೂ ಆಯ್ಕೆಯಾಗಿದ್ದಾರೆ. ಪ್ರಸ್ತುತ ಎಂ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ.

2024-25 ರ ಸಾಲಿನಲ್ಲಿ ಇದೇ ಅಕಾಡೆಮಿಯ ಮೂವರು ವಿದ್ಯಾರ್ಥಿಗಳಾದ ತೇಜಸ್ವಿರಾಜ್, ತನುವಿ, ಸಿಂಚನಾ ಎಸ್.ಭಟ್ ಇವರು ಶಿಷ್ಯ ವೇತನಕ್ಕೆ ಆಯ್ಕೆಯಾಗಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article