ಅ.17 ರಂದು ಪುತ್ತೂರಿನಲ್ಲಿ 4ನೇ ವರ್ಷದ ಪಿಲಿಗೊಬ್ಬು

ಅ.17 ರಂದು ಪುತ್ತೂರಿನಲ್ಲಿ 4ನೇ ವರ್ಷದ ಪಿಲಿಗೊಬ್ಬು

ಪುತ್ತೂರು: ಪುತ್ತೂರಿನ ವಿಜಯ ಸಾಮ್ರಾಟ್ ಸಂಸ್ಥೆಯ ವತಿಯಿಂದ ತುಳುನಾಡಿನ ಧಾರ್ಮಿಕ-ಸಾಂಸ್ಕೃತಿಕ ವಿಶಿಷ್ಟ ಜಾನಪದ ಕಲೆಯಾದ ಹುಲಿವೇಷ ಕುಣಿತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪುತ್ತೂರುದ ಪಿಲಿಗೊಬ್ಬು ಎಂಬ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು, ಸ್ಪರ್ಧೆಯ ನಾಲ್ಕನೇ ಸೀಸನ್ ಅ.17 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಸಂಘಟನೆಯ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ಹೇಳಿದರು.

ಅವರು ಗುರುವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೊರೊನಾ ಕಾಲಘಟ್ಟದಲ್ಲಿ ನೊಂದವರ ಧ್ವನಿಯಾಗಿ ಆರಂಭಗೊಂಡ ಸಂಘಟನೆಯು ಹಲವು ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದು, ಈಗಾಗಲೇ ಹಲವು ಬಡ ಕುಟುಂಬಗಳಿಗೆ ಮನೆ ನಿರ್ಮಾಣದ ಕಾರ್ಯವನ್ನು ಮಾಡಿದೆ. ಇದರ ಜತೆಗೆ ಕಳೆದ ಮೂರು ವರ್ಷಗಳಲ್ಲಿ ಪಿಲಿಗೊಬ್ಬ ಸ್ಪರ್ಧೆಯನ್ನು ಯಶಸ್ವಿಯಾಗಿ ಸಂಘಟಿಸಿದೆ.

ಅ. 17ರಂದು ಬೆಳಗ್ಗೆ 10.30ಕ್ಕೆ ಸ್ಪರ್ಧೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಸ್ಪರ್ಧೆಯನ್ನು ಉದ್ಘಾಟಿಸಲಿದ್ದು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಸಹಿತ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದು, ಜತೆಗೆ ಸೆಲೆಬ್ರಿಟಿಗಳಾದ ಬಾಲಿವುಡ್ ನ ಸೋನು ಸೂದ್, ಪೃಥ್ವಿ ಅಂಬರ್ ಮೊದಲಾದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಸ್ಪರ್ಧೆಯಲ್ಲಿ 9 ಹುಲಿವೇಷದ ತಂಡಗಳು ಪಾಲ್ಗೊಳ್ಳಲಿದ್ದು, ಮೊದಲ ಮೂರು ವಿಜೇತರಿಗೆ ಕ್ರಮವಾಗಿ 4, 3, 2 ಲಕ್ಷ ರೂ.ಗಳ ನಗದು ಬಹುಮಾನವಿರುತ್ತದೆ. ಜತೆಗೆ ಪ್ರತಿ ತಂಡಗಳಿಗೂ 60 ಸಾವಿರ ರೂ.ಗಳ ಗೌರವಧನವಿರುತ್ತದೆ. ಜತೆಗೆ ಹಲವು ವೈಯಕ್ತಿಕ ಬಹುಮಾನಗಳನ್ನೂ ನೀಡಲಾಗುತ್ತದೆ. ಸ್ಪರ್ಧೆಯ ಜತೆಗೆ ಅ.17 ಹಾಗೂ 18ರಂದು ಆಹಾರ ಮೇಳವನ್ನೂ ಆಯೋಜಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯನ್ನು ಸಂಘಟನೆಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪದಾಧಿಕಾರಿಗಳಾದ ರತನ್ ರೈ ಕುಂಬ್ರ, ಶರತ್ ಆಳ್ವ ಕೂರೇಲು, ಅಶೋಕ್ ಅಡೂರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article