ರಥಬೀದಿ ಕಾಲೇಜಿನಲ್ಲಿ ‘ಕನ್ನಡ ಭಾಷೆ ಮತ್ತು ಕೃತಕ ಬುದ್ಧಿ ಮತ್ತೆಯ ಪಾತ್ರ’: ಉಪನ್ಯಾಸ ಕಾರ್ಯಕ್ರಮ

ರಥಬೀದಿ ಕಾಲೇಜಿನಲ್ಲಿ ‘ಕನ್ನಡ ಭಾಷೆ ಮತ್ತು ಕೃತಕ ಬುದ್ಧಿ ಮತ್ತೆಯ ಪಾತ್ರ’: ಉಪನ್ಯಾಸ ಕಾರ್ಯಕ್ರಮ


ಮಂಗಳೂರು: ಕನ್ನಡ ಭಾಷಿಕರ ಸಂಖ್ಯೆ ದೊಡ್ಡದಿದ್ದರೂ ಡಿಜಿಟಲ್ ಜಗತ್ತಿನಲ್ಲಿ ಕನ್ನಡದ ಬಳಕೆ ಸೀಮಿತವಾಗಿದೆ. ಸವಾಲುಗಳನ್ನು ಅವಕಾಶಗಳನ್ನಾಗಿಸಿ ಕೊಂಡು ಕೃತಕ ಬುದ್ಧಿ ಮತ್ತೆಯ ಜ್ಞಾನ ಶಾಖೆಯಲ್ಲಿ ಕನ್ನಡದ ಬಳಕೆಯನ್ನು ಮಾಡಬೇಕಾಗಿದೆ. ವಿದ್ಯಾರ್ಥಿಗಳು ಕುತೂಹಲದಿಂದ ಪ್ರಶ್ನಿಸಿ, ಅನುಕೂಲಕರವಾದ ಸಂದರ್ಭವನ್ನು ಸೃಷ್ಟಿಸಿಕೊಳ್ಳುವ ಅಗತ್ಯವಿದೆ. ಅಪಾರವಾದ ಕನ್ನಡ ಜ್ಞಾನ ವಿಚಾರಗಳನ್ನು ಕೃತಕ ಬುದ್ಧಿ ಮತ್ತೆಯಲ್ಲಿ ಬಳಸಿಕೊಳ್ಳಲು ಸಾಧ್ಯವಿದೆ ಎಂದು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪದ್ಮನಾಭ ಬಿ. ಹೇಳಿದರು.

ಅವರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಮಂಗಳೂರು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಗಿಳಿವಿಂಡು ಸಂಸ್ಥೆ ಹಮ್ಮಿಕೊಂಡಿರುವ ‘ಗಿಳಿವಿಂಡು ಬಾರಿಸು ಕನ್ನಡ ಡಿಂಡಿಮವ.. ಮರಳಿ ಮನೆಗೆ.. ಅರಿವಿನ ಯಾನ: ಉಪನ್ಯಾಸ ಸರಣಿಯಲ್ಲಿ ನುಡಿ 13..’ ಕನ್ನಡ ಭಾಷೆಯ ಬಳಕೆ: ಕೃತಕ ಬುದ್ಧಿ ಮತ್ತೆಯ ಪಾತ್ರ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಗಿಳಿವಿಂಡಿನ ಅಧ್ಯಕ್ಷ ಡಾ. ಬಿ. ಶಿವರಾಮ ಶೆಟ್ಟಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ, ಕ್ಷಿಪ್ರವಾಗಿ ಬದಲಾವಣೆಗೊಳ್ಳುತ್ತಿರುವ ತಂತ್ರಜ್ಞಾನದ ಅವಶ್ಯಕತೆಗಳಿಗೆ ಸ್ಪಂದಿಸಿ ಕನ್ನಡ ಭಾಷಾ ಜ್ಞಾನ ಧಾರೆಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಕನ್ನಡ ಜ್ಞಾನ ವಿಚಾರದ ಸೃಷ್ಟಿ ಹಾಗೂ ಅಳವಡಿಕೆ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಯ ಅವಕಾಶಗಳಿವೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಜಯಕರ ಭಂಡಾರಿ ಎಂ. ಮಾತನಾಡಿ, ಕೃತಕ ಬುದ್ಧಿ ಮತ್ತೆಯ ಜ್ಞಾನವನ್ನು ಎಚ್ಚರದಿಂದ ಬಳಸಬೇಕಾಗಿದೆ ಎಂದರು. 

ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿಪ್ರಿಯ ಉಪಸ್ಥಿತರಿದ್ದರು.

ಉಪನ್ಯಾಸಕಿ ಡಾ. ಉಷಾ ಸ್ವಾಗತಿಸಿದರು. ಗಿಳಿವಿಂಡು ಸದಸ್ಯ ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿನೋದಾ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕ ಸತೀಶ ಎನ್. ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article