ಅ.11 ರಂದು ಬೆದ್ರ ತುಳುಕೂಟದಿಂದ ತುಳು ಮಾನಾದಿಗೆದ ಮಿನದನ
Wednesday, October 7, 2026
ಮೂಡುಬಿದಿರೆ: ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಮಾನ್ಯತೆ ಬಂದಿರುವ ಹಿನ್ನೆಲೆಯಲ್ಲಿ ತುಳುಕೂಟ ಬೆದ್ರ ಇದರ ವತಿಯಿಂದ ಅ. 11ರಂದು 'ತುಳು ಮಾನಿದಿಗೆದ ಮಿನದನ' ಕಾಯ೯ಕ್ರಮವು ಎಂಸಿಎಸ್ ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಬೆಳಗ್ಗೆ 10.10ಕ್ಕೆ ನಡೆಯಲಿದೆ.
ಬೆದ್ರ ತುಳುಕೂಟದ ಅಧ್ಯಕ್ಷೆ ಜಯಂತಿ ಎಸ್. ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾಯ೯ಕ್ರಮದಲ್ಲಿ ಅಖಿಲ ಭಾರತ ತುಳು ಒಕ್ಕೂಟ ಕುಡ್ಲ ಇದರ ಅಧ್ಯಕ್ಷ ಎ. ಸಿ. ಭಂಡಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕೆ. ಅಭಯಚಂದ್ರ ಜೈನ್, ಕೆ. ಶ್ರೀಪತಿ ಭಟ್, ಎಂ. ಬಾಹುಬಲಿ ಪ್ರಸಾದ್, ಸಂಪತ್ ಸಾಮ್ರಾಜ್ಯ ಅವರು ಗೌರವ ಉಪಸ್ಥಿತರಿರುವರು.
ಬೆದ್ರ ತುಳುಕೂಟದ ಸ್ಥಾಪಕಾಧ್ಯಕ್ಷ ಚಂದ್ರಹಾಸ ದೇವಾಡಿಗ, ಪ್ರಧಾನ ಕಾಯ೯ದಶಿ೯ ಚೇತನಾ ರಾಜೇಂದ್ರ, ಉಪಾಧ್ಯಕ್ಷರುಗಳಾದ ಶ್ವೇತಾ ಕೆ. ಜೈನ್, ಶಿವರಾಮ್ ಜೆ. ಶೆಟ್ಟಿ, ಪ್ರಸಾದ್ ಭಂಡಾರಿ ಜತೆ ಕಾಯ೯ದಶಿ೯ ಸದಾನಂದ ನಾರಾವಿ ಹಾಗೂ ಕೋಶಾಧಿಕಾರಿ ಜಿನೇಂದ್ರ ಹೆಗ್ಡೆ ಉಪಸ್ಥಿತರಿರುವರು.