ಕೃತಕ ಅಂಗಾಂಗ ಜೋಡಣಾ ಶಿಬಿರಗಳಿಂದ ಮರುಜೀವ, ಆತ್ಮವಿಶ್ವಾಸ: ರೆ. ಡಾ.ಪ್ರವೀಣ್ ಮಾರ್ಟಿಸ್

ಕೃತಕ ಅಂಗಾಂಗ ಜೋಡಣಾ ಶಿಬಿರಗಳಿಂದ ಮರುಜೀವ, ಆತ್ಮವಿಶ್ವಾಸ: ರೆ. ಡಾ.ಪ್ರವೀಣ್ ಮಾರ್ಟಿಸ್


ಮಂಗಳೂರು: ದೈಹಿಕ ಅಶಕ್ತರಿಗೆ ಕೃತಕ ಅಂಗಾಂಗ ಜೋಡಣಾ ಶಿಬಿರಗಳು ಮರುಜೀವ ನೀಡುವುದರ ಜೊತೆಗೆ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವರಿಗೆ ಸ್ವಾಭಿಮಾನ, ಘನತೆಯ ಬದುಕಿಗೆ ಇಂತಹ ಶಿಬಿರಗಳು ನೆರವಾಗುತ್ತದೆ ಎಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ರೆ. ಡಾ.ಪ್ರವೀಣ್ ಮಾರ್ಟಿಸ್ ಅಭಿಪ್ರಾಯಪಟ್ಟಿದ್ದಾರೆ.

ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಸಂತ ಅಲೋಷಿಯಸ್ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ ಮಂಗಳೂರು, ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಬೆಂಗಳೂರು, ಯುಟಿಕೆ ಸೋಷಿಯಲ್ ಫಾರಮ್ ಮಂಗಳೂರು ಸಹಯೋಗದೊಂದಿಗೆ ಅನಿವಾಸಿ ಉದ್ಯಮಿಗಳಾದ ಡಾ.ರೊನಾಲ್ಡ್ ಕೊಲಾಸೊ ಹಾಗೂ ಶಮೀರುರ್ರಹ್ಮಾನ್ ಅವರ ಪ್ರಾಯೋಜಕತ್ವದಲ್ಲಿ ನಗರದ ಕೊಡಿಯಾಲ್ ಬೈಲ್ನ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ಲೊಯೋಲಾ ಹಾಲ್‌ನಲ್ಲಿ ಸೋಮವಾರ ಯು.ಟಿ.ಖಾದರ್ ಜನ್ಮದಿನಾಚರಣೆ , ಬೃಹತ್ ಕೈ ಕಾಲು ಜೋಡಣಾ ಶಿಬಿರ ಹಾಗೂ ವಿಕಲಾಂಗ ಸಲಕರಣೆಗಳ ವಿತರಣಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.

ಅನಿವಾಸಿ ಉದ್ಯಮಿ ಶಮೀರುರ್ರಹ್ಮಾನ್ ಅವರ ತಂದೆ ಉದ್ಯಮಿ ಬಿ. ಮಹಮ್ಮದ್ ಅಮ್ಮುಂಜೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕೃತಕ ಕೈಕಾಲು ಜೋಡಣಾ ಶಿಬಿರದ ಮುಖ್ಯ ಸಂಯೋಜಕ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೈಕಾಲು ಇಲ್ಲದವರಿಗೆ ಕೃತಕ ಕೈಕಾಲು ಅಳವಡಿಸಿದ ಪರಿಣಾಮವಾಗಿ ಅವರ ಕಣ್ಣಲ್ಲಿ ಬರುವ ಆನಂದ ಭಾಷ್ಪ ನಮಗೆ ನಿಜವಾಗಿಯೂ ದೊರೆಯುವ ದೊಡ್ಡ ಯಶಸ್ಸು, ಇದರಿಂದ ಅವರಿಗೆ ಪುನರ್ಜನ್ಮ ನೀಡಿದ ಧನ್ಯತಾ ಭಾವನೆ ಸಂಘಟನೆಗೆ ದೊರೆಯುತ್ತದೆ. ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಎಂ.ಫ್ರೆಂಡ್ಸ್ ಚಾರಿಟೇಬಲ್ 360 ಮಂದಿಗೆ ಕೃತಕ ಕೈಕಾಲುಗಳನ್ನು ಜೋಡಿಸಲಾಗಿದೆ ಎಂದು ತಿಳಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸಂತ ಅಲೋಶಿಯಸ್ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ವಿದ್ಯಾ ವಿನುತಾ ಡಿ ಸೋಜ, ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಅಲಿ ಅಕ್ರಮ್ ಶಾ, ಲೈಫ್ ಲೈನ್ ಹೆಲ್ತ್ ಕೇರ್ ಮುಖ್ಯಸ್ಥ ಡಾ.ಮುಹಮ್ಮದ್ ಮುಬಶ್ಶಿರ್, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಝೀಝ್ ಬಸ್ತಿಕಾರ್, ಎನ್‌ಎಸ್ಯುಐ ಧುರೀಣ ಹಾಗೂ ಯು.ಟಿ. ಖಾದರ್ ಅವರ ಸಹೋದರನ ಪುತ್ರ ಯು.ಟಿ. ಫರೀದ್ ಮುಖ್ಯ ಅತಿಥಿಯಾಗಿದ್ದರು. ಸಂತ ಅಲೋಶಿಯಸ್ ಸಮಾಜಕಾರ್ಯ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಚಂದ್ರಮತಿ, ಎಂಫ್ರೆಂಡ್ಸ್ನ ಉಪಾಧ್ಯಕ್ಷ ವಿಎಚ್ ಅಶ್ರಫ್, ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಮುಖ್ಯಸ್ಥ ಮುರಳಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಂತ ಅಲೋಶಿಯಸ್ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ವಿದ್ಯಾ ವಿನುತಾ ಡಿ ಸೋಜ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ರಫೀಕ್ ಮಾಸ್ಟರ್ ಪ್ರೇರಣಾ ತರಗತಿಯನ್ನು ನಡೆಸಿದರು. ಮುಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು. 

110 ಮಂದಿಗೆ ಕೃತಕ ಕೈಕಾಲು ವಿತರಣೆ..

ಎರಡು ದಿನಗಳ ಕಾರ್ಯಕ್ರಮದಲ್ಲಿ ಈಗಾಗಲೇ ನೋಂದಾವಣೆ ಮಾಡಿರುವ 110 ಮಂದಿ ವಿಕಲಾಂಗರಿಗೆ ಕೃತಕ ಕೈಕಾಲನ್ನು ವಿತರಿಸಲಾಗುವುದು. ಗಾಲಿಕುರ್ಚಿ, ಕ್ಯಾಲಿಪರ್, ವಾಕರ್ ಹಾಗೂ ಸ್ಟಿಕ್ ನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article