ಹೆಚ್‌ಪಿಸಿಎಲ್‌ನಿಂದ ನಿಯಮ ಬಾಹಿರವಾಗಿ ಹೊರದಬ್ಬಿಸಿಕೊಂಡಿರುವ ಕನ್ನಡಿಗ ಮಹಿಳಾ ಗುತ್ತಿಗೆ ಕಾರ್ಮಿಕರಿಗೆ ಡಿವೈಎಫ್‌ಐ ಸುರತ್ಕಲ್ ಘಟಕ ಬೆಂಬಲ

ಹೆಚ್‌ಪಿಸಿಎಲ್‌ನಿಂದ ನಿಯಮ ಬಾಹಿರವಾಗಿ ಹೊರದಬ್ಬಿಸಿಕೊಂಡಿರುವ ಕನ್ನಡಿಗ ಮಹಿಳಾ ಗುತ್ತಿಗೆ ಕಾರ್ಮಿಕರಿಗೆ ಡಿವೈಎಫ್‌ಐ ಸುರತ್ಕಲ್ ಘಟಕ ಬೆಂಬಲ

ಮಂಗಳೂರು: ಹೆಚ್‌ಪಿಸಿಎಲ್‌ನಲ್ಲಿ ಕಳೆದ 15 ವರ್ಷಗಳ ಕಾಲ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದ ನಾಲ್ಕು ಮಹಿಳಾ ಕಾರ್ಮಿಕರನ್ನು ಏಕಾಏಕಿ ಕಂಪೆನಿ ಕೆಲಸದಿಂದ ಕಿತ್ತು ಹಾಕಿದೆ. ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿರುವ ಮಹಿಳಾ ಕಾರ್ಮಿಕರು ಸೆಪ್ಟೆಂಬರ್ 1 ರಿಂದ ಕಂಪೆನಿ ಮುಂಭಾಗ ಧರಣಿ ನಡೆಸುತ್ತಿದ್ದಾರೆ. ಸಿಐಟಿಯು ಹಾಗೂ ನಾಗರಿಕ ಹೋರಾಟ ಸಮಿತಿ, ಸುರತ್ಕಲ್ ಈ ಬಡ ಮಹಿಳಾ ಕಾರ್ಮಿಕರಿಗೆ ಧೈರ್ಯ ತುಂಬಿ ಸಾಥ್ ನೀಡಿದೆ.

ಇಂದು ಧರಣಿ ನಿರತ ಮಹಿಳಾ ಕಾರ್ಮಿಕರನ್ನು ಡಿವೈಎಫ್‌ಐ ಸುರತ್ಕಲ್ ಘಟಕದ ಪ್ರಮುಖರು ಭೇಟಿಯಾಗಿ ಬೆಂಬಲ ವ್ಯಕ್ತಪಡಿಸಿದರು.

ಶ್ರೀನಾಥ್ ಕುಲಾಲ್, ಮಕ್ಸೂದ್ ಬಿ.ಕೆ., ಅಜ್ಮಾಲ್ ಕಾನ, ಇಮ್ತಿಯಾಜ್ ಕುಳಾಯಿ, ಬಶೀರ್ ಫಿಟ್ಟರ್, ಮಯ್ಯದ್ದಿ ಕುಳಾಯಿ, ಐ. ಮಹಮ್ಮದ್, ಖಾಲಿದ್ ಕೃಷ್ಣಾಪುರ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article