ಎಂ.ಆರ್.ಪೂವಮ್ಮ ಅವರಿಗೆ ಸನ್ಮಾನ
Sunday, October 4, 2026
ಮಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ರಿಲೇಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಪದಕ ವಿಜೇತ ಎಂ.ಆರ್.ಪೂವಮ್ಮ ಅವರನ್ನು ಉರ್ವ ಸ್ಟೋರ್‌ನ ಅವರ ಮನೆಯಲ್ಲಿ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಜಿಲ್ಲಾಡಳಿತ ವತಿಯಿಂದ ಶನಿವಾರ ಸಮ್ಮಾನಿಸಿದರು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಪಂ ಸಿಇಒ ವಿನಾಯಕ ನರ್ವಡೆ ಕರ್ಬಾರಿ, ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕೋಚ್ ದಿನೇಶ್ ಕುಂದರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ಯುವ ಸಬಲೀಕರಣ ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೊಜಾ, ಕಣಚೂರು ಮೋನು, ಪೂವಮ್ಮ ಅವರ ಹೆತ್ತವರು, ಮನೆಯವರು ಈ ವೇಳೆ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಚಿವ ಖಾದರ್, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಈಗಾಗಲೇ ಪೂವಮ್ಮ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ. ಅ.6 ರಂದು ಬೆಂಗಳೂರಿನಲ್ಲಿ ಪೂವಮ್ಮ ಸಹಿತ ಪದಕ ವಿಜೇತ ರಾಜ್ಯದ ಇತರ ಕ್ರೀಡಾಪಟುಗಳನ್ನು ಸಮ್ಮಾನಿಸಲಾಗುವುದು. ರಾಜ್ಯ ಸರಕಾರದ ಪ್ರೋತ್ಸಾಹ ಧನವನ್ನು ಮುಖ್ಯ ಮಂತ್ರಿಗಳು ಈ ವೇಳೆ ಘೋಷಣೆ ಮಾಡಲಿದ್ದಾರೆ ಎಂದರು.