ಮಹಾತ್ಮರ ತತ್ವಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿ ಆಚರಣೆಗಳಿಗೆ ನಿಜವಾದ ಅರ್ಥ ಸಿಗುತ್ತದೆ: ಪ್ರೊ. ಜಯಕರ ಭಂಡಾರಿ

ಮಹಾತ್ಮರ ತತ್ವಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿ ಆಚರಣೆಗಳಿಗೆ ನಿಜವಾದ ಅರ್ಥ ಸಿಗುತ್ತದೆ: ಪ್ರೊ. ಜಯಕರ ಭಂಡಾರಿ

ಮಂಗಳೂರು ರಥಬೀದಿ ಕಾಲೇಜಿನಲ್ಲಿ ಗಾಂಧಿ ಮತ್ತು ಶಾಸ್ತ್ರೀ ಜಯಂತಿ ಆಚರಣೆ


ಮಂಗಳೂರು: "ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ತತ್ವಗಳನ್ನು ಕೇವಲ ಮಾತಿನಲ್ಲಿ ಆಡದೆ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಜಯಂತಿ ಆಚರಣೆಗಳಿಗೆ ನಿಜವಾದ ಅರ್ಥ ಸಿಗುತ್ತದೆ,''  ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ. ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಪ್ರೊ. ಭಂಡಾರಿ ಅವರು ಮಂಗಳೂರಿನ ಪ್ರತಿಷ್ಠಿತ ಡಾ. ಪಿ. ದಯಾನಂದ ಪೈ - ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನೋತ್ಸವ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂ‌ರ್ ಶಾಸ್ತ್ರಿ ಅವರ ಜಯಂತಿ ಆಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 


ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ತದನಂತರ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಒಟ್ಟಾಗಿ ಭಾಗವಹಿಸಿದ ಭಕ್ತಿಪೂರ್ವಕ 'ಸರ್ವಧರ್ಮ ಪ್ರಾರ್ಥನೆ'ಯು ನೆರೆದಿದ್ದವರಲ್ಲಿ ಶಾಂತಿ ಮತ್ತು ಸಾಮರಸ್ಯದ ಭಾವವನ್ನು ಮೂಡಿಸಿತು.

ಗಾಂಧೀಜಿಯವರ ವಿಚಾರಧಾರೆಗಳ ಕುರಿತು ದ್ವಿತೀಯ ವರ್ಷದ ಎಂ.ಎಸ್.ಡಬ್ಲ್ಯೂ (MSW) ವಿದ್ಯಾರ್ಥಿನಿ ಪ್ರಿಯಾ ಹಾಗೂ ಪ್ರಥಮ ವರ್ಷದ ಎಂ.ಎ (MA) ವಿದ್ಯಾರ್ಥಿನಿ ಅಶ್ವಿನಿ ಅವರು ಅನಿಸಿಕೆಗಳನ್ನು ಹಂಚಿಕೊಂಡರು. ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಸ್ವಾವಲಂಬನೆಯ ತತ್ವಗಳು ಇಂದಿನ ಯುವ ಪೀಳಿಗೆಗೆ ಹೇಗೆ ಮಾರ್ಗದರ್ಶಕವಾಗಿವೆ ಎಂಬುದನ್ನು ವಿದ್ಯಾರ್ಥಿನಿಯರು ತಮ್ಮ ಭಾಷಣದಲ್ಲಿ ಸುಂದರವಾಗಿ ವಿವರಿಸಿದರು.

ಈ ರೀತಿಯಲ್ಲಿ ಮಹಾತ್ಮರ ಜಯಂತಿಯನ್ನು ಅತ್ಯಂತ ಶ್ರದ್ಧಾ, ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS), ಯೂತ್ ರೆಡ್ ಕ್ರಾಸ್ (YRC) ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಸ್ವಯಂಸೇವಕರು ಕಾಲೇಜು ಆವರಣದಲ್ಲಿ 'ಸ್ವಚ್ಛತಾ ಅಭಿಯಾನ'ದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು, ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಶ್ರಮದಾನ ಮಾಡುವ ಮೂಲಕ ಇಡೀ ಕಾಲೇಜು ಆವರಣವನ್ನು ಸ್ವಚ್ಛಗೊಳಿಸಿದರು.

ಡಾ. ಅಶೋಕ ಸಿ.ಹೆಚ್‌. ಸ್ವಾಗತಿಸಿದರು. ಡಾ. ಮೋಹನದಾಸ್  ವಂದಿಸಿದರು. ಡಾ. ಅಪರ್ಣಾ ಆಳ್ವ ಅವರು ಕಾರ್ಯಕ್ರಮದ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕ-ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article