ಎಸ್‌ಐಟಿಗೆ ಮುಚ್ಚಿದ ಲಕೋಟೆ ನೀಡಿದ ಜಯಂತ್..

ಎಸ್‌ಐಟಿಗೆ ಮುಚ್ಚಿದ ಲಕೋಟೆ ನೀಡಿದ ಜಯಂತ್..

ಮಂಗಳೂರು: ಹದಿನಾಲ್ಕು ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಎಸ್‌ಐಟಿ ಮುಂದಾಗಿರುವಂತೆಯೇ  ಸಾಮಾಜಿಕ ಹೋರಾಟಗಾರ ಜಯಂತ್ ಟಿ, ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ಮುಚ್ಚಿದ ಲಕೋಟೆಯೊಂದನ್ನು ನೀಡಿದ್ದಾರೆ. 

ಎಸ್‌ಐಟಿ ಕಚೇರಿಯಲ್ಲಿ ಸುಧೀರ್ ಕುಮಾರ್ ರೆಡ್ಡಿ ಇಲ್ಲದ ಕಾರಣ, ಪೊಲೀಸ್ ಕಮಿಷನg ಕಚೇರಿಗೆ ಬಂದು ಲಕೋಟೆ ನೀಡಿದ್ದಾರೆ. ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಮುಚ್ಚಿದ ಲಕೋಟೆಯಲ್ಲಿ ಒಂದಿಷ್ಟು ಜನರ ಹೆಸರನ್ನು ಕೊಟ್ಟಿದ್ದೇನೆ. ಅವರಿಗೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಬಗ್ಗೆ ಮಾಹಿತಿ ಇದೆ. ಅವರು ಕೂಡ ಅದರಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಅವರನ್ನು ಸಾಕ್ಷಿ ಅಥವಾ ಆರೋಪಿಯನ್ನಾಗಿಸಿ ವಿಚಾರಣೆ ಮಾಡಬಹುದು. ದಕ್ಷ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರ ಕಚೇರಿಗೆ ಲಕೋಟೆ ಕೊಟ್ಟು ಅವರಿಗೆ ವಿಷಯ ತಿಳಿಸಿದ್ದೇನೆ. ಅವರನ್ನೆಲ್ಲಾ ಈ ಹಿಂದೆ ಪೊಲೀಸರು, ಸಿಐಡಿ, ಸಿಬಿಐ ತನಿಖೆ ಮಾಡಿಲ್ಲ ಹಾಗಾಗಿ ಅವರ ತನಿಖೆ ಮಾಡಿದರೆ ಸತ್ಯ ಹೊರಬರುತ್ತದೆ ಎಂದಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article