BREAKING
ದಕ್ಷಿಣ ಕನ್ನಡ

ಜಿ.ಪಂ., ತಾ.ಪಂ. ಚುನಾವಣೆಗೆ ಅಂತಿಮ ಮೀಸಲಾತಿ ಪ್ರಕಟ: ಕಾಂಗ್ರೆಸ್ ನಿಂದ ಸುಚರಿತ ಶೆಟ್ಟಿ ಆಕಾಂಕ್ಷಿ


ಮೂಡುಬಿದಿರೆ: ಮುಂದೆ ನಡೆಯಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಅಂತಿಮ ಮೀಸಲಾತಿ ಪ್ರಕಟಗೊಂಡಿದ್ದು ಪುತ್ತಿಗೆ ಜಿ. ಪಂ.ಕ್ಷೇತ್ರಕ್ಕೆ ಈ ಹಿಂದೆ ಹಿಂದುಳಿದ ವರ್ಗ ಎ.ಮೀಸಲಾತಿ ಪ್ರಕಟಗೊಂಡಿತ್ತು ಇದೀಗ ಬದಲಾದ ಮೀಸಲಾತಿಯಲ್ಲಿ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿದೆ. 

ತಾಲೂಕಿನಲ್ಲಿ ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಮತ್ತು  9 ತಾಲೂಕು ಪಂಚಾಯತ್ ಕ್ಷೇತ್ರಗಳಿವೆ. ಇದರಲ್ಲಿ ಇದೀಗ  ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದ ಮೀಸಲಾತಿ ಬದಲಾವಣೆಯಾಗಿದೆ. 

ಅಂತಿಮವಾಗಿ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿರುವುದರಿಂದ ಕಾಂಗ್ರೆಸ್ ನಿಂದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಈ ಹಿಂದೆ ಇದೇ ಕ್ಷೇತ್ರದಿಂದ ಕೆ.ಪಿ.ಸುಚರಿತ ಶೆಟ್ಟಿ ಬಿಜೆಪಿಯಿಂದ ಸ್ಪಧಿ೯ಸಿ ವಿಜೇತರಾಗಿದ್ದರು. ಆದರೆ ಇದೀಗ ಬಿಜೆಪಿಯಿಂದ ದೂರಕ್ಕೆ ಉಳಿದಿರುವ ಸುಚರಿತ ಶೆಟ್ಟಿ ಕಾಂಗ್ರೆಸ್ ಗೆ ಸೇಪ೯ಡೆಗೊಂಡು  ಸ್ಪಧಿ೯ಸಲು ಮನಸ್ಸು ಮಾಡಿದ್ದಾರೆ  ಅಲ್ಲದೆ ಕಾಂಗ್ರೆಸ್ ನಿಂದ ಚಂದ್ರಹಾಸ ಸನಿಲ್  ಕೂಡಾ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.  ಬಿಜೆಪಿಯಲ್ಲಿ ಹಲವು ಮಂದಿ ಮುಖಂಡರು ಚುನಾವಣೆಗೆ ಸ್ಪಧಿ೯ಸಲು ನಾವೂ ರೆಡಿ ಎಂದು ಆಕಾಂಕ್ಷಿಗಳಾಗಿ ತುದಿಗಾಲಲ್ಲಿ ನಿಂತಿದ್ದಾರೆ ಆದರೆ ಪಕ್ಷ ಯಾರಿಗೆ ಅವಕಾಶ ನೀಡುತ್ತದೆ ಎಂದು ಕಾದು ನೋಡಬೇಕಿದೆ.

📢 ಡೈಲಿ ಪಲ್ಸ್ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!