ಅಪಘಾತದಲ್ಲಿ ಇಬ್ಬರು ಯುವಕರು ಮೃತ್ಯು ಪ್ರಕರಣ: ಪಿಕಪ್ ಚಾಲಕ ಸೆರೆ

ಅಪಘಾತದಲ್ಲಿ ಇಬ್ಬರು ಯುವಕರು ಮೃತ್ಯು ಪ್ರಕರಣ: ಪಿಕಪ್ ಚಾಲಕ ಸೆರೆ

ಮಂಗಳೂರು: ಬೋಳಿಯಾರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರಿಗೆ ಪಿಕಪ್ ವಾಹನದಿಂದ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಕೊಲೆ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪಿಕಪ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಪಿಕಪ್ ಚಾಲಕ ಹಫೀಝ್ ಅಲಿಯಾಸ್ ಅಪ್ಪಿ ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉಳ್ಳಾಲ ತಾಲೂಕಿನ ಕಿನ್ಯಾ ಗ್ರಾಮದ ಇಸ್ಮಾಯಿಲ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಪಿಕಪ್ ಚಾಲಕ ಹಫೀಝ್ ಅಲಿಯಾಸ್ ಅಪ್ಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಅ.೧೯ ರಂದು ಸಂಜೆ ಸ್ಕೂಟರ್‌ನಲ್ಲಿ ಬಂದಿದ್ದ ಜುನೈದ್ ಮತ್ತು ಅರ್ಫಾಝ್ ಹಾಗೂ ಪಿಕಪ್ ಚಾಲಕ ಹಫೀಝ್ ನಡುವೆ ಮಾತಿನ ಚಕಮಕಿ ನಡೆದು ಬಳಿಕೆ ಹೊಡೆದಾಟ ನಡೆದಿತ್ತು. ನಂತರ ಜುನೈದ್ ಮತ್ತು ಅರ್ಫಾಝ್ ಸ್ಕೂಟರ್‌ನಲ್ಲಿ ಮುಡಿಪು ಕಡೆಗೆ ತೆರಳಿದ್ದರು. ಇದನ್ನು ಕಂಡ ಹಫೀಝ್ ಪಿಕಪ್ ವಾಹನದಲ್ಲಿ ಅವರನ್ನು ಹಿಂಬಾಲಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಬ್ಬರನ್ನೂ ಕೊಲೆ ಮಾಡುವ ಉದ್ದೇಶದಿಂದ ಹಫೀಝ್ ಪಿಕಪ್ ವಾಹನದಲ್ಲಿ ಬೆನ್ನಟ್ಟಿ, ಬೋಳಿಯಾರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಸ್ಕೂಟರ್‌ಗೆ ಹಿಂದಿನಿಂದ ರಭಸವಾಗಿ ಢಿಕ್ಕಿ ಹೊಡೆದಿದ್ದು, ಈ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಸ್ಕೂಟರ್‌ನಲ್ಲಿದ್ದ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಘಟನೆ ಬಳಿಕ ಆರೋಪಿ ಪಿಕಪ್ ವಾಹನವನ್ನು ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ದೂರು ದಾಖಲಾಗಿದೆ.

ಅವರ ಮಧ್ಯೆ ಈ ಹಿಂದೆಯೇ ವೈಷಮ್ಯವಿತ್ತು. ನಿನ್ನೆ ಗೆಳೆಯನ ಮೊಬೈಲ್ ವಿಷಯದಲ್ಲಿ ಮಾತಿನ ಚಕಮಕಿ ನಡೆದಿತ್ತು. ಅದೇ ವಿಷಯದಲ್ಲಿ ಸಿಟ್ಟಿನ ಭರದಲ್ಲಿ ಬೊಲೊರೊ ಢಿಕ್ಕಿಪಡಿಸಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article