ಎಂಡಿಎಂಎ ಸಾಗಾಟ: ಇಬ್ಬರ ಬಂಧನ

ಎಂಡಿಎಂಎ ಸಾಗಾಟ: ಇಬ್ಬರ ಬಂಧನ

ಮಂಗಳೂರು: ದ್ವಿಚಕ್ರ ವಾಹನದಲ್ಲಿ  ಎಂಡಿಎಂಎ ಮಾದಕವಸ್ತು ಸಾಗಿಸುತ್ತಿದ್ದ ಇಬ್ಬರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಬೇಕೂರು ನಿವಾಸಿ ರಿಯಾಝ್ ಹಾಗೂ ನೆಲ್ಲಿಕಟ್ಟೆ ಚೂರಿಮೂಲೆಯ ರಫೀಕ್ ಬಂಧಿತರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ನಿತಿನ್ರಾಜ್ ಅವರ ನೇತೃತ್ವದ ನಾರ್ಕೋಟಿಕ್ ಸೆಲ್ ಡ್ಯಾನ್ಸಾಫ್ ತಂಡ ಹಾಗೂ ಆದೂರು ಪೊಲೀಸರು ಮಂಗಳವಾರ ಮುಂಜಾನೆ ಆದೂರು ಪಳ್ಳಂ ಸೇತುವೆ ಸಮೀಪ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಿಂದ 18 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. 2019ರ ಜೂನ್ 23ರಂದು ರಾತ್ರಿ ಉಪ್ಪಳ ಕೈಕಂಬದಲ್ಲಿ ಅಲ್ತಾಫ್ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣದಲ್ಲಿ ಬೇಕೂರು ರಿಯಾಝ್ ಎರಡನೇ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕರ್ನಾಟಕದಲ್ಲಿಯೂ ರಿಯಾಸ್ ವಿರುದ್ಧ ಹಲವು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article