ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಸಲು ಯೋಗ ಸಹಕಾರಿ: ಸ್ವಾಮಿ ಯುಗೇಶಾನಂದಜೀ

ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಸಲು ಯೋಗ ಸಹಕಾರಿ: ಸ್ವಾಮಿ ಯುಗೇಶಾನಂದಜೀ


ಮಂಗಳೂರು: ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಯೋಗದಿಂದ ನೆಮ್ಮದಿಯ ಬದುಕನ್ನು ಕಾಣಬಹುದು, ಸಮರ್ಥ ಶರೀರವನ್ನೂ ಸ್ವಸ್ಥ ಮನಸ್ಸನ್ನೂ ಯೋಗದಿಂದ ಪಡೆಯಬಹುದು. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ನಿಯಮಿತವಾದ ಯೋಗಭ್ಯಾಸವು ಹೆಚ್ಚು ನಮ್ಯತೆ, ಶಕ್ತಿ ಮತ್ತು ಸಮತೋಲನವನ್ನು ಒದಗಿಸುವುದಲ್ಲದೆ ನಮ್ಮ ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ ಯೋಗದ ಮೂಲಕ ಅಭ್ಯಾಸ ಮಾಡುವ ವಿವಿಧ ಭಂಗಿಗಳು ಉಸಿರಾಟದ ವ್ಯಾಯಾಮಗಳು ಮತ್ತು ವಿಶ್ರಾಂತಿ ತಂತ್ರಗಳು ನರಮಂಡಲವನ್ನು ಬಲಪಡಿಸುತ್ತದೆ. ಇದರಿಂದಾಗಿ ಸಮತೋಲನವನ್ನು ತರುತ್ತದೆ  ಮತ್ತು ಜಾಗ್ರತ ಜೀವನವನ್ನು ನಡೆಸಲು ನಮಗೆ ಸಹಾಯ ಮಾಡುತ್ತದೆ ಎಂದು ಬಾಲಕಾಶ್ರಮದ ವಾರ್ಡನ್ ಸ್ವಾಮಿ ಯುಗೇಶಾನಂದಜೀ ಹೇಳಿದರು.

ಅವರು ಇಂದು ಇಲ್ಲಿನ ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣ ಮಠದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಮಾರ್ಗದರ್ಶನದಲ್ಲಿ ನಡೆಯುವ ಎರಡು ವಾರಗಳ ಕಾಲ ಜರುಗುವ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಪ್ರಯೋಜನಗಳನ್ನು ತಿಳಿಸಿದರು.

ದೇಲಂಪಾಡಿ ಶಿಷ್ಯರಾದ ಸುಮಾ, ಭಾರತಿ, ಚಂದ್ರಹಾಸ ಬಾಳ, ಹಾಗೂ ಪ್ರೇಮ ಇವರು ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article