ಹೋರಾಟದಿಂದ ಶೋಷಿತ ಸಮುದಾಯಕ್ಕೆ ಮುಕ್ತಿ: ಈಶ್ವರಿ ಪದ್ಮುಂಜ

ಹೋರಾಟದಿಂದ ಶೋಷಿತ ಸಮುದಾಯಕ್ಕೆ ಮುಕ್ತಿ: ಈಶ್ವರಿ ಪದ್ಮುಂಜ


ಪುತ್ತೂರು: ಸಂಘಟನೆ ಮತ್ತು ಹೋರಾಟದಿಂದ ಮಾತ್ರ ಶೋಷಿತ ಸಮುದಾಯವಾದ ದಲಿತರು ಮುಕ್ತಿ ಹೊಂದಲು ಸಾಧ್ಯ ಎಂದು ದಲಿತ ಹಕ್ಕುಗಳ ರಾಜ್ಯ ಸಮಿತಿ ಸದಸ್ಯೆ ಈಶ್ವರಿ ಪದ್ಮುಂಜ ಹೇಳಿದರು.

ಪುತ್ತೂರು ಮಾಜಿ ಸೈನಿಕರ ಭವನದಲ್ಲಿ ನಡೆದ ತಾಲೂಕು ದಲಿತ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮೊದಲು ನಾವು ಬದಲಾಗೋಣ. ಆ ಮೂಲಕ ಸಮಾಜದ ಬದಲಾವಣೆಗೆ ದುಡಿಯೋಣ ಜೊತೆಗೆ ಶೋಷಣೆ, ಅಸಮಾನತೆ, ವಿರುದ್ದ ಹೊರಾಟ ನಡೆಸೋಣ. ಕೆಲವೇ ಕೆಲವು ಜನರ ಬಳಿ ಕೇಂದೃಕೃತವಾದ ಭೂಮಿಯ ಮರು ಹಂಚಿಕೆಗೆ ಸರ್ಕಾರವನ್ನು ಆಗ್ರಹಿಸಲು ಸಿದ್ದರಾಗೋಣ ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ನ್ಯಾಯವಾದಿ ಪಿಕೆ ಸತೀಶನ್, ನ್ಯಾಯವಾದಿ ಬಿ.ಎಂ.ಭಟ್ ಮುಖ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಅ.೧೫ರಂದು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಬ್ರಾಂಚ್‌ನ್ನು ಪುತ್ತೂರಲ್ಲಿಯೂ ಸ್ಥಾಪಿಸಬೇಕೆಂದು ಆಗ್ರಹಿಸಿ ಸಿಪಿಐಎಂ ನಡೆಸಲುದ್ದೇಶಿಸಿದ ಹೋರಾಟಕ್ಕೆ ಡಿ.ಎಚ್.ಎಸ್ ಬೆಂಬಲ ನೀಡಿ ಭಾಗವಹಿಸಲು ತೀರ್ಮಾನಿಸಲಾಯಿತು. 

ಸಮಾವೇಶದಲ್ಲಿ ದಲಿತ ಹಕ್ಕುಗಳ ಸಮಿತಿ ಪುತ್ತೂರು ತಾಲೂಕು ಘಟಕವನ್ನು ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ನಿವೃತ್ತ ಎಲೈಸಿ ನೌಕರರಾದ ಚಿದಾನಂದ, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ನಿಡ್ಪಳ್ಳಿ, ಖಜಾಂಜಿಯಾಗಿ ಸುಂದರ ಹಾಗೂ ಉಪಾಧ್ಯಕ್ಷರಾಗಿ ಲತಾ ಬನ್ನೂರು, ಕೊರಗಪ್ಪ ಈಶ್ವರ ಮಂಗಲ, ಸಹಕಾರ್ಯದರ್ಶಿಯಾಗಿ ಗುರುವ ಸರ್ವೆ, ಶಂಕರ ಮುಂಡೂರು ಹಾಗೂ ಸಲಹೆಗಾರರಾಗಿ ಸಾಮಾಜಿಕ ಹೋರಾಟಗಾರರಾದ ಪಿ.ಕೆ. ಸತೀಶನ್ ಅವರನ್ನು ಆಯ್ಕೆ ಮಾಡಲಾಯಿತು, ಸಮಿತಿಯ ಪ್ರಧಾನ ಸದಸ್ಯರಾಗಿ ಕರಿಯ ಕಾಡಬಾಗಿಲು, ಬಾಲಚಂದ್ರ, ದೇವಪ್ಪ, ಗುರುವ ನಿಡ್ಪಳ್ಳಿ ಆಯ್ಕೆಯಾದರು. ಸಂಘದ ಕಾರ್ಯದರ್ಶಿ ಕೃಷ್ಣ ಸ್ವಾಗತಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article