ಬ್ಯಾಲೆಟ್ ಪೇಪರ್‌ನಲ್ಲಿ ನಡೆದ ಚುನಾವಣೆಯಲ್ಲಿಯೂ ಬಿ.ಜೆ.ಪಿ.ಗೆ ಜೈ ಎಂದ ಮತದಾರರು

ಬ್ಯಾಲೆಟ್ ಪೇಪರ್‌ನಲ್ಲಿ ನಡೆದ ಚುನಾವಣೆಯಲ್ಲಿಯೂ ಬಿ.ಜೆ.ಪಿ.ಗೆ ಜೈ ಎಂದ ಮತದಾರರು

ಮಂಗಳೂರು: ಬ್ಯಾಲೆಟ್ ಪೇಪರ್‌ನಲ್ಲಿ (ಮತ ಪತ್ರ) ಅಸ್ಸಾಂನಲ್ಲಿ 42 ಸ್ಥಾನಗಳಿಗೆ ಮತ್ತು ತ್ರಿಪುರದಲ್ಲಿ 4,500 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿNDA 32 ಮತ್ತು 4,000 ಸಾವಿರಕ್ಕೂಅಧಿಕ ಸ್ಥಾನಗಳಲ್ಲಿ ಜಯಭೇರಿಯನ್ನು ಭಾರಿಸಿ ಕಾಂಗ್ರೆಸ್ ಕೇವಲ 2 ಮತ್ತು 14 ಸ್ಥಾನಗಳಿಸಿದ್ದು ಮತದಾರ ಸರಿಯಾದ ಬುದ್ಧಿಯನ್ನು ಫಲಿತಾಂಶದ ಮೂಲಕ ನೀಡಿದ್ದಾರೆ. ಸದಾಚುನಾವಣಾಆಯೋಗ, ಇ.ವಿ.ಎಮ್. ಬಗ್ಗೆ ಅಪಪ್ರಚಾರವನ್ನು ನಡೆಸಿ ಗೊಂದಲ ಸೃಷ್ಟಿಸಲು ಹೊರಟವರಿಗೆತೀವ್ರ ಮುಖಭಂಗವಾಗಿದೆಎಂದು ಭಾರತೀಯಜನತಾ ಪಾರ್ಟಿಯದಕ್ಷಿಣಕನ್ನಡಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶದ ಜನತೆ ಕಾಂಗ್ರೆಸ್ ನ್ನು ತಿರಸ್ಕರಿಸಿರುವುದು ಪದೇಪದೇ ಸಾಬೀತಾದರು ಸಂವಿಧಾನಬದ್ಧ ಸಂಸ್ಥೆ ಚುನಾವಣಾಆಯೋಗದ ಮೇಲೆ ಆರೋಪ ವ್ಯಕ್ತಪಡಿಸುತ್ತಿರುವುದುತಮ್ಮ ವೈಫಲ್ಯತೆಯನ್ನು ಮುಚ್ಚಿಡಲು ಮಾಡುತ್ತಿರುವ ನಾಟಕವಾಗಿದೆ ಎಂದು ಸತೀಶ್ ಕುಂಪಲ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article