‘ಸಂತ್ರಸ್ತ ಕುಟುಂಬಗಳ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ’

‘ಸಂತ್ರಸ್ತ ಕುಟುಂಬಗಳ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ’


ಮಂಗಳೂರು: ಬಜ್ಪೆ ಗ್ರಾಮದ ಕೈಗಾರಿಕಾ ವಲಯಕ್ಕೆ ಹೊಂದಿಕೊಂಡಿರುವ ಶಾಂತಿಗುಡ್ಡೆ ಕಾಲನಿಯ 105 ಮನೆಗಳ ನಿವಾಸಿಗಳು ಕಳೆದ 20 ವರ್ಷಗಳಿಂದ ಕೈಗಾರಿಕೆಗಳ ಮಾಲಿನ್ಯ ಹಾಗೂ ಅದರ ದುಷ್ಪರಿಣಾಮಗಳ ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಶಾಂತಿಗುಡ್ಡೆ ಕಾಲನಿಯ ಸರ್ವೆ ನಂಬರ್ 138/1ರ ವ್ಯಾಪ್ತಿಯ ಸುಮಾರು ನಾಲ್ಕು ಎಕರೆ ಪ್ರದೇಶವನ್ನು ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡಿಸಿ, ಅಲ್ಲಿನ ಕುಟುಂಬಗಳಿಗೆ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದೆ.

ಶಾಂತಿಗುಡ್ಡೆ ಕಾಲನಿಯ ಸರ್ವೆ ನಂಬರ್ 138/1ರ ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ 105 ಮನೆಗಳಿದ್ದು, ಈ ಪ್ರದೇಶವು ಕೈಗಾರಿಕಾ ವಲಯದ ಅಂಚಿನಲ್ಲಿದೆ. ಕಳೆದ ಎರಡು ದಶಕಗಳಿಂದ ಇಲ್ಲಿನ ನಿವಾಸಿಗಳು ಕೈಗಾರಿಕೆಗಳಿಂದ ಉಂಟಾಗುತ್ತಿರುವ ಮಾಲಿನ್ಯ ಮತ್ತು ಪರಿಸರ ಸಂಬಂಽತ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ನಿವಾಸಿಗಳ ಹಿತದೃಷ್ಟಿಯಿಂದ ಭೂಸ್ವಾಽನ ಪ್ರಕ್ರಿಯೆ ಕೈಗೊಳ್ಳಬೇಕೆಂದು ಕಳೆದ 20 ವರ್ಷಗಳಿಂದ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ವೇದಿಕೆಯ ಸಂಚಾಲಕ ಸಿರಾಜ್ ಹುಸೈನ್ ಬಜ್ಪೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2007ರಲ್ಲಿ ಕೆಐಎಡಿಬಿಯಿಂದ ಭೂಸ್ವಾಽನಕ್ಕೆ ಸಂಬಂಧಿಸಿದಂತೆ 28/2 ಮತ್ತು 28/3ರ ಅಡಿಯಲ್ಲಿ ನೋಟೀಸ್ಗಳನ್ನು ಜಾರಿಗೊಳಿಸಲಾಗಿತ್ತು. ಆದರೂ ಈವರೆಗೆ ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ನಿವಾಸಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಎಂಆರ್ಪಿಎಲ್ನ ಹೆಸರು ವಲಯ ನಿರ್ಮಾಣಕ್ಕೆ ಸಂಬಂಽಸಿದಂತೆ ಶಾಂತಿಗುಡ್ಡೆ ಪ್ರದೇಶವನ್ನು ಸೇರ್ಪಡೆಗೊಳಿಸಿ ಭೂಸ್ವಾಽನ ಪ್ರಕ್ರಿಯೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ, ಸಂಸದರು, ಶಾಸಕರು, ಎಂಆರ್ಪಿಎಲ್, ಎಂಎಸ್‌ಇಝಡ್, ಕೆಐಎಡಿಬಿ, ಪರಿಸರ ಇಲಾಖೆ ಹಾಗೂ ಸ್ಥಳೀಯ ಪಟ್ಟಣ ಪಂಚಾಯತ್ಗೆ ಮನವಿ ಸಲ್ಲಿಸಲಾಗಿದೆ. ಈ ಹಿಂದೆಯೂ ಹಲವು ಬಾರಿ ಮನವಿ ಸಲ್ಲಿಸಿದ್ದರೂ ನಿವಾಸಿಗಳ ಸಮಸ್ಯೆಗೆ ಪರಿಷ್ಕೃತ ಮನವಿ ಸಲ್ಲಿಸಲಾಗಿದೆ. ಈ ಹಿಂದೆಯೂ ಹಲವು ಬಾರಿ ಮನವಿ ಸಲ್ಲಿಸಿದ್ದರೂ ನಿವಾಸಿಗಳ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಇದೀಗ ಮತ್ತೆ ಜಿಲ್ಲಾಽಕಾರಿಗೆ ಮನವಿ ಸಲ್ಲಿಸುತ್ತಿದ್ದು ಉತ್ತಮ ಸ್ಪಂದನೆಯ ಭರವಸೆ ಇದೆ ಎಂದು ಅವರು ಹೇಳಿದರು.

ಪ್ರಸ್ತುತ ಶಾಂತಿಗುಡ್ಡೆ ಕಾಲನಿಯ ಸಮೀಪ ಕಾರ್ಯನಿರ್ವಹಿಸುತ್ತಿರುವ ಎಂಆರ್ಪಿಎಲ್ ಸೇರಿದಂತೆ ಕೈಗಾರಿಕೆಗಳಿಂದ ಉಂಟಾಗಬಹುದಾದ ಪರಿಸರ ಮಾಲಿನ್ಯದ ಬಗ್ಗೆ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ.  ವಿಶೇಷವಾಗಿ ಎಂಆರ್ಪಿಎಲ್ನ ಕೋಕ್ ಮತ್ತು ಸಲರ್ ಘಟಕಗಳಿಂದ ಹೊರಹೊಮ್ಮುವ ಹಾರುಬೂದಿ ಹಾಗೂ ಇತರೆ ಮಾಲಿನ್ಯಕಾರಕಗಳಿಂದ ಚರ್ಮ ರೋಗ, ಕ್ಯಾನ್ಸರ್ ಮೊದಲಾದ ಆರೋಗ್ಯ  ದುಷ್ಪರಿಣಾಮಗಳನ್ನು ಎದುರಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದರು.

ಸಹ ಸಂಚಾಲಕ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ನಿಸಾರ್, ಉಪಾಧ್ಯಕ್ಷ ವಸಂತ್, ಕೃಷ್ಣ ರಾಜ್, ರಫೀಕ್, ಶಿಶಿರ್ ಕುಮಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article