ಮಂಗಳೂರಿನ ಅವೖಜ್ಞಾನಿಕ ಕಂದಾಯ ನೀತಿ: ಡಿವೈಎಫ್ಐ ಪ್ರತಿಭಟನೆಯ ಎಚ್ಚರಿಕೆ

ಮಂಗಳೂರಿನ ಅವೖಜ್ಞಾನಿಕ ಕಂದಾಯ ನೀತಿ: ಡಿವೈಎಫ್ಐ ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು: ಮಂಗಳೂರಿನ ಪ್ರತ್ಯೇಕ ಕಂದಾಯ ನೀತಿಗೆ ಇಲ್ಲಿನ ಜನತೆ ಬಲಿಯಾಗುತ್ತಿದೆ. ರಾಜ್ಯದ ಇತರೇ ಜಿಲ್ಲೆಗಳ ಕಂದಾಯ ನಿಯಮಗಳನ್ನು ಗಮನಿಸಿದರೆ ಮಂಗಳೂರಿನ ನಿಯಮಗಳು ಕಾನೂನು ಪರಿಣಿತರ ಅರಿವಿಗೂ ಬಾರದ ರೀತಿಯ ಕಂದಾಯ ನಿಯಮಗಳು ಇಲ್ಲಿವೆ. ಈ ಅಸಮರ್ಪಕ ನಿಯಮಗಳಿಂದ ಇಲ್ಲಿನ ಜನ ಸಾಮಾನ್ಯರಿಗೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ತನ್ನ ಭೂಮಿಯಲ್ಲಿ ನಿರ್ದಿಷ್ಟ ಭಾಗವನ್ನು ಆಯ್ದುಕೊಂಡು ಮನೆ ನಿರ್ಮಾಣಕ್ಕೆ ಅಥವಾ ಇತರೇ ಉದ್ದೇಶದ ಕಟ್ಟಡ ನಿರ್ಮಾಣಕ್ಕೆ ಭೂ ಪರಿವರ್ತನೆಗೊಳಿಸುವುದು ಅಥವಾ ತನ್ನ ಸಂಕಷ್ಟಕ್ಕೆ ಸಹಕಾರಿಯಾಗುವಂತೆ ಒಂದು ಭಾಗದ ಭೂಮಿಯನ್ನು ಮಾರಾಟ ಮಾಡುವ ಸ್ವತ್ತಿನ ಖಾಸಗೀ ಹಕ್ಕನ್ನು ಮಂಗಳೂರಿನ ಕಂದಾಯ ನಿಯಮಗಳು ಕಸಿದುಕೊಂಡಿವೆ.

ದಕ್ಷಿಣ ಕನ್ನಡದಲ್ಲಿರುವ ಖಾಸಗೀ ಭೂಮಿಗಳಲ್ಲಿ ಪೖಕಿಯನ್ನು ಆಯ್ದುಕೊಂಡು ಭೂ ಪರಿವರ್ತನೆ ನಡೆಸುವುದಕ್ಕೆ ಮಂಗಳೂರಿನ ಕಂದಾಯ ನಿಯಮಗಳಲ್ಲಿ ಅನುಮತಿಗಳಿಲ್ಲ ಅದರ ಬದಲಾಗಿ ಇರುವ ಇಡೀ ಭೂಮಿಯನ್ನು ಪರಿವರ್ತನೆಗೊಳಿಸಬೇಕು. ನಂತರದಲ್ಲಿ  ವಿನ್ಯಾಸ ಅನುಮೋದನೆಯ ಸಂಧರ್ಬದಲ್ಲಿ ಇಡೀ ನಿವೇಶನದ ಭೂಮಿಗೆ ವಿನ್ಯಾಸ ಅನುಮೋದನೆಗೊಳಿಸಬೇಕು. ಇಲ್ಲವೇ ಭಾಗಶಃ ಭೂಮಿಯನ್ನು ಆಯ್ಕೆಮಾಡುವ ಸಂದರ್ಬದಲ್ಲಿ ಉಳಿಕೆ ಭೂಮಿಗೆ ದಂಡವನ್ನು ಕಟ್ಟಬೇಕೆಂಬ ನಿಯಮ ತೀರಾ ಅವೖಜ್ಞಾನಿಕವಾದುದು.

ಜೊತೆಗೆ ಈ ಹಿಂದೆ ಕಡ್ಡಾಯಗೊಳಿಸಿದ ಪ್ರಾಪರ್ಟಿ ಕಾರ್ಡನ್ನು ರದ್ದುಗೊಳಿಸಿರುವುದು, ಪ್ರಾಪರ್ಟಿ ಕಾರ್ಡ್ ಮೂಲಕ ನೋಂದಾಯಿಸಿಕೊಂಡ ದಸ್ತಾವೇಜುಗಳ ಮಾಲಕರ ಹೆಸರುಗಳನ್ನು ಪಹಣೆಯಲ್ಲಿ ನೊಂದಾಯಿಸಿಕೊಳ್ಳುವುದನ್ನು ರದ್ದುಗೊಳಿಸಿರುವುದು. ಉಳಿಕೆ ಖಾತಾಗಳ ಸಮಸ್ಯೆ ಮೊದಲಾದವುಗಳು ಇಲ್ಲಿನ ಕಂದಾಯ ನೀತಿಗಳ ಅಸ್ತವ್ಯಸ್ತತೆಯನ್ನು ತೋರಿಸುತ್ತವೆ. ಮಂಗಳೂರಿನ ಬಹುತೇಕ ನಿವೇಶನಗಳು ಕಾಲುದಾರಿ ಮತ್ತು ಕಚ್ಚಾ ರಸ್ತೆಗಳನ್ನು ಹೊಂದಿದ್ದು ಇಂತಹಾ ಪ್ರದೇಶಗಳಿಗೆ ಭೂ ಪರಿವರ್ತನೆ ಮತ್ತು ವಿನ್ಯಾಸ ಅನುಮೋದನೆಯನ್ನು ನೀಡದೇ ಇರುವುದು ಈ ಭಾಗದ ಬಹುತೇಕ ಜನರ ಸಮಸ್ಯೆಯಾಗಿ ಎದುರಾಗಿದೆ.

ಈ ನಡುವೆ ರಾಜ್ಯ ಉಸ್ತುವಾರಿಗಳು ಮತ್ತು ರಾಜ್ಯ ಆರೋಗ್ಯ ಸಚಿವರಾದ ಯು ಟಿ ಖಾದರ್ ರವರು ಭೂ ಪರಿವರ್ತನೆ ಮತ್ತು ವಿನ್ಯಾಸ ಅನುಮೋದನೆಯನ್ನು ಸ್ಥಳೀಯ ಆಡಳಿತಕ್ಕೆ ವಹಿಸಿಕೊಟ್ಟು ಸುಲಭೀಕರಿಸುವುದಾಗಿ ಪತ್ರಿಕಾ ಹೇಳಿಕೆ ಕೊಟ್ಟಿರುವರೇ ವಿನಃ ಈ ಕುರಿತು ಯಾವುದೇ ಕೆಲಸಗಳು ನಡೆದಿಲ್ಲ. ಈ ಎಲ್ಲಾ ಅವೖಜ್ಞಾನಿಕತೆಯನ್ನು ಬಳಸಿಕೊಂಡು ಕಂದಾಯ ಇಲಾಖೆಗಳು ನಡೆಸುತ್ತಿರುವ ಭ್ರಷ್ಟಾಚಾರಗಳನ್ನು ಕೇಳುವವರೇ ಇಲ್ಲ.

ಈ ಸಮಸ್ಯೆಗಳನ್ನು ಸ್ಥಳೀಯ ಆಡಳಿತ ಮತ್ತು ಉಸ್ತುವಾರಿ ಸಚಿವರು ಗಮನಹರಿಸಿ ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ಮಂಗಳೂರಿನ ಅವೖಜ್ಞಾನಿಕ ಕಂದಾಯ ನಿಯಮಗಳ ವಿರುದ್ಧ,ತಾಲೂಕು ಕಛೇರಿ ಮತ್ತು ಮೂಡಾ ಕಛೇರಿಯ ಭ್ರಷ್ಟಾಚಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದಾಗಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಡಿವೖಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಮನೋಜ್ ವಾಮಂಜೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article