ಪಣಂಬೂರು ಸಮುದ್ರದಲ್ಲಿ ಮುಳುಗಿ ಬಾಲಕ ನಾಪತ್ತೆ
Monday, October 5, 2026
ಮಂಗಳೂರು: ಪಣಂಬೂರು ಸಮುದ್ರದಲ್ಲಿ ಮುಳುಗಿ 15 ವರ್ಷದ ಬಾಲಕನೊಬ್ಬ ನಾಪತ್ತೆಯಾಗಿರುವ ಘಟನೆ ಸೋಮವಾರ ನಡೆದಿದೆ.
ಬೆಳ್ತಂಗಡಿ ಮೂಲದ, ರೆಂಕೆದಗುತ್ತು ನಿವಾಸಿ ಶೇಖರ್ ಕೆಂಬರ್ಜೆ ಅವರ ಪುತ್ರ ಶ್ರೇಯಸ್ (15) ನಾಪತ್ತೆಯಾಗಿರುವ ಬಾಲಕ. 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶ್ರೇಯಸ್ ಸ್ನೇಹಿತರೊಂದಿಗೆ ಪಣಂಬೂರು ಬೀಚ್‌ಗೆ ತೆರಳಿದ್ದ ವೇಳೆ ಸಮುದ್ರದಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.
ಘಟನೆ ತಿಳಿದು ಪಣಂಬೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.