ಔಷಧಿಗಳ ದರ ನಿಯಂತ್ರಣಕ್ಕೆ ಕೇಂದ್ರಕ್ಕೆ ಪತ್ರ: ಆರೋಗ್ಯ ಸಚಿವ ಯು.ಟಿ. ಖಾದರ್
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದರ ನಿಗದಿ ಅಧಿಕಾರ: ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರಕ್ಕೆ (NPPA) ಕೇವಲ ಶೆಡ್ಯೂಲ್ಡ್ (ಪಟ್ಟಿ ಮಾಡಲಾದ) ಔಷಧಗಳ ಬೆಲೆಯನ್ನು ನಿಯಂತ್ರಿಸುವ ಅಧಿಕಾರವಿದೆಯೇ ಹೊರತು ಎಲ್ಲ ಔಷಧಗಳ ಮೇಲಿಲ್ಲ. ಹೀಗಾಗಿ ಶೆಡ್ಯೂಲ್ ವ್ಯಾಪ್ತಿಗೆ ಬಾರದ ಔಷಧಗಳಿಗೆ ಕಂಪನಿಗಳು ನೂರಾರು ಪಟ್ಟು ಹೆಚ್ಚಿನ ಲಾಭ ನಿಗದಿಪಡಿಸುತ್ತಿವೆ
5 ಸಾವಿರ ಬೆಲೆಯ ಇಂಜೆಕ್ಷನ್‌ಗೆ 60 ಸಾವಿರ ದರ ವಿಧಿಸಲಾಗುತ್ತಿದೆ; ರೋಗಿಗೆ 12 ಇಂಜೆಕ್ಷನ್ ನೀಡಿದರೆ 70 ಸಾವಿರದಿಂದ 80 ಸಾವಿರ ವೆಚ್ಚವಾಗುವ ಜಾಗದಲ್ಲಿ 7.5 ಲಕ್ಷದವರೆಗೆ ವಸೂಲಿ ಮಾಡಲಾಗುತ್ತಿದೆ.
ಔಷಧಗಳ ಬೆಲೆ ನಿಯಂತ್ರಿಸುವ ನೇರ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲದ ಕಾರಣ, ಎಲ್ಲ ಜೀವರಕ್ಷಕ ಔಷಧಗಳನ್ನು ಬೆಲೆ ನಿಯಂತ್ರಣ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ವರದಿ ಸಲ್ಲಿಸಲಾಗಿದೆ.
ಕನ್ಸ್ಯುಮರ್ ಇಂಜೆಕ್ಷನ್ ಹಾಗೂ ಇಂಪ್ಲಾಂಟ್ಗಳ ದರ ತಪಾಸಣೆ ನಡೆಯುತ್ತಿದ್ದು, ಮುಂದಿನ ಹಂತದಲ್ಲಿ 186 ಪ್ರಮುಖ ಹೈ - ಬ್ರ್ಯಾಂಡ್ ಔಷಧಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಈ ಕುರಿತಂತೆ ಸುಪ್ರೀಂ ಕೋರ್ಟ್ ಕೂಡ ಚಾಟಿ ಬೀಸಿದ್ದು, ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.